ಐತಿಹಾಸಿಕ, ಕಾಲ್ಪನಿಕ ವಿಷಯಗಳೆಂದರೆ ಬಹಳ ಇಷ್ಟ: ಎಸ್.ಎಸ್. ರಾಜಮೌಳಿ

ಐತಿಹಾಸಿಕ, ಕಾಲ್ಪನಿಕ ವಿಷಯಗಳೆಂದರೆ ಬಹಳ ಇಷ್ಟ. ಚಿಕ್ಕವನಿದ್ದಾಗಿನಿಂದಲೂ ಇಂತಹ ಕಥೆಗಳನ್ನು ಬಹಳ ಕುತೂಹಲದಿಂದ ಕೇಳುತ್ತಿದ್ದೆ ಎಂದು ಟಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಎಂದೇ ಖ್ಯಾತಿಗಳಿಸಿರುವ ಎಸ್.ಎಸ್.ರಾಜಮೌಳಿ ಹೇಳಿದ್ದಾರೆ...
ನಿರ್ದೇಶಕ ಎಸ್.ಎಸ್. ರಾಜಮೌಳಿ
ನಿರ್ದೇಶಕ ಎಸ್.ಎಸ್. ರಾಜಮೌಳಿ

ಐತಿಹಾಸಿಕ, ಕಾಲ್ಪನಿಕ ವಿಷಯಗಳೆಂದರೆ ಬಹಳ ಇಷ್ಟ. ಚಿಕ್ಕವನಿದ್ದಾಗಿನಿಂದಲೂ ಇಂತಹ ಕಥೆಗಳನ್ನು ಬಹಳ ಕುತೂಹಲದಿಂದ ಕೇಳುತ್ತಿದ್ದೆ ಎಂದು ಟಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಎಂದೇ ಖ್ಯಾತಿಗಳಿಸಿರುವ ಎಸ್.ಎಸ್.ರಾಜಮೌಳಿ ಹೇಳಿದ್ದಾರೆ.

ತಮ್ಮ ಬಹುನಿರೀಕ್ಷಿತ ಚಿತ್ರ ಬಾಹುಬಲಿ ಚಿತ್ರದ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿರುವ ರಾಜಮೌಳಿ ಅವರು, ಐತಿಹಾಸಿಕ ವಿಷಯಗಳು, ಪೌರಾಣಿಕ ಕಥೆ, ಜಾನಪದ, ಕಲ್ಪನೆತೀತ ಕಥೆಗಳೆಂದರೆ ನನಗೆ ಮೊದಲಿನಿಂದಲೂ ಬಹಳ ಪ್ರೀತಿ ಹಾಗಾಗಿಯೇ ಬಾಹುಬಲಿ ಬಾಹುಬಲಿ ಚಿತ್ರಕ್ಕೆ ಐತಿಹಾಸಿಕ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಹೇಳಿದ್ದಾರೆ.

ಬಾಹುಬಲಿ ಚಿತ್ರ ನಿರ್ಮಾಣಕ್ಕೆ ಚಿತ್ರದ ತಂಡ ಸಾಕಷ್ಟು ಶ್ರಮ ಪಟ್ಟಿದ್ದು, ಪೂರ್ವ ನಿರ್ಮಾಣ ತಯಾರಿಗೆ ಒಂದು ವರ್ಷ ಬೇಕಾಯಿತು. ಇನ್ನೆರಡು ವರ್ಷದ ಸಮಯ ಚಿತ್ರೀಕರಣಕ್ಕೆ ಬೇಕಾಯಿತು. ಹಾಗಾಗಿ ಚಿತ್ರ ಸಂಪೂರ್ಣಗೊಳಿಸಲು 3 ವರ್ಷಬೇಕಾಯಿತು. ಹೈ ಕ್ವಾಲಿಟಿ ಚಿತ್ರ ನಿರ್ಮಾಣಕ್ಕೆ ಸಾಕಷ್ಟು ಹಣ ವ್ಯಯಿಸಬೇಕು ಮತ್ತು ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಯಶಸ್ವಿ ನಿರ್ದೇಶಕನಾಗಲು ಬಯಸುವವರು ಪ್ರಮುಖವಾಗಿ ಅತೀ ಹೆಚ್ಚು ತಾಂತ್ರಿಕ ಜ್ಞಾನವುಳ್ಳವನಾಗಿರಬೇಕು. ತಾಂತ್ರಿಕ ಜ್ಞಾನವುಳ್ಳವನಿಗೆ ಚಿತ್ರ ವೀಡಿಯೋ ಕ್ವಾಲಿಟಿ ಹಾಗೂ ಇನ್ನಿತರೆ ತಾಂತ್ರಿಕ ದೋಷಗಳನ್ನು ಅರಿಯುವ ಸಾಮರ್ಥ್ಯ ಸುಲಭವಾಗಿ ಅರ್ಥವಾಗುತ್ತದೆ.

ಇಂತಹ ತಾಂತ್ರಿಕಜ್ಞಾನ ಉಳ್ಳವನು ಖಂಡಿತವಾಗಿ ಯಶಸ್ವಿ ನಿರ್ದೇಶಕನಾಗಬಲ್ಲ. ತಾಂತ್ರಿಕಜ್ಞಾನದಲ್ಲಿ ಹೆಚ್ಚುಳ್ಳವರನ್ನು ಹೆಚ್ಚಿನ ನಿರ್ಮಾಪಕರು ಇಷ್ಟಪಡುತ್ತಾರೆ. ಹಾಗಾಗಿಯೇ ಇಂದು ನಾನು ಯಶಸ್ವಿ ನಿರ್ದೇಶಕನಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.  

ಇದೇ ವೇಳೆ ಟಾಲಿವುಡ್ ನಲ್ಲಿ ಸೂಪರ್ ಹಿಟ್ ಆದ ಮಗಧೀರ ಚಿತ್ರ ಹಿಂದಿಯಲ್ಲಿ ರಿಮೇಕ್ ಆಗುತ್ತಿರುವುದರ ಕುರಿತಂತೆ ಮಾತನಾಡಿರುವ ಅವರು, ಮಗಧೀರ ಚಿತ್ರ ಮಾಡಲು ನನಗೆ 2 ವರ್ಷ ಬೇಕಾಯಿತು. ಹಿಂದಿಯಲ್ಲಿ ರಿಮೇಕ್ ಆಗುತ್ತಿರುವ ಮಗಧೀರ ಚಿತ್ರದ ಬಗ್ಗೆ ತಿಳಿದಿಲ್ಲ. ನನ್ನ ಚಿತ್ರವನ್ನೇ ನಾನೇ ರಿಮೇಕ್ ಮಾಡುವುದು ನನಗೆ ಇಷ್ಟವಿಲ್ಲ. ಅಂತಹ ಚಿತ್ರಗಳಿಗೆ ದುಡ್ಡು ಹಾಕುವುದಕ್ಕೆ ನನಗೆ ಇಷ್ಟವಿಲ್ಲ. ಹಿಂದಿ ಮಗಧೀರ ಚಿತ್ರಕ್ಕೂ ನನಗೆ ಸಂಬಂಧವಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com