
ಲಂಡನ್: ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಅವರ ಪುತ್ರ ಚೆಸ್ಟರ್ 'ಚೆಟ್' ಹ್ಯಾಂಕ್ಸ್ ಅವರನ್ನು ಹೋಟೆಲ್ ರೂಮೊಂದನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಬ್ರಿಟಿಶ್ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಲಂಡನ್ನಿನ ಹೊರಭಾಗ ಗ್ಯಾಟ್ವಿಕ್ ವಿಮಾನ ನಿಲ್ದಾಣದ ನಾಲ್ಕು ಸ್ಟಾರ್ ಹೋಟೆಲ್ ವೊಂದರಲ್ಲಿ ಮೂವರು ಮಹಿಳೆಯರು ತನ್ನ ಜೊತೆ ಮಲಗಲು ನಿರಾಕರಿಸಿದ್ದಕ್ಕೆ ರೂಮೊಂದನ್ನು ಧ್ವಂಸ ಮಾಡಿ ೧೨೦೦ ಪೌಂಡ್ ಗಳಷ್ಟು ನಷ್ಟಕ್ಕೆ ೨೪ ವರ್ಷದ ರ್ಯಾಪ್ ಸಂಗೀತಗಾರ ಕಾರಣನಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಮೂಲಗಳ ಪ್ರಕಾರ ಕ್ಲಬ್ ವೊಂದರಲ್ಲಿ ಔತಣಕೂಟ ನಡೆಸಿ "ಮೂವರು ಮಹಿಳಾ ಪ್ರಚಾರಕಿಯರು ಹಾಗು ಬ್ರಿಟಿಶ್ ನಟನೊಂದಿಗೆ ರೂಮಿಗೆ ತೆರಳಿದ್ದಾನೆ. ಕಾರು ನಿಲುಗಡೆ ಜಾಗದಲ್ಲಿಯೇ ಗಲಾಟೆ ಪ್ರಾರಂಭಿಸಿ ರೂಮಿಗೆ ತೆರಳಿ ಜೋರಾಗಿ ಕಿರುಚಾಟ ಪ್ರಾರಂಭಿಸಿದ್ದಾರೆ.
"ತನ್ನ ಜೊತೆ ಹಾಸಿಗೆಗೆ ಬರುವಂತೆ ಯುವತಿಯರಿಗೆ ಕೇಳಿದ್ದಾನೆ ಆದರೆ ಅವರು ನಿರಾಕರಿಸಿದ್ದಕೆ ಕಿರುಚಾಡಿದ್ದಾನೆ. ನಂತರ ರೂಮಿನಲ್ಲಿರುವ ವಸ್ತುಗಳನ್ನು ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದಾನೆ" ಎಂದು ತಿಳಿಯಲಾಗಿದೆ.
Advertisement