ಚಿತ್ರ ಸೋತರೆ ನನ್ನ ನಿಂದನೆ ಬೇಡ: 'ವಿರಾಟ್' ನಿರ್ಮಾಪಕರಿಗೆ ದರ್ಶನ್ ಕಿವಿಮಾತು

ಮೂರ ವರ್ಷಗಳ ಹಿಂದೆ ಸೆಟ್ಟೇರಿದ್ದ ದರ್ಶನ್ ಅಭಿನಯದ ಹೆಚ್. ವಾಸು ನಿರ್ದೇಶನದ ವಿರಾಟ್ ಚಿತ್ರ ಹಣಕಾಸು ಮುಗ್ಗಟ್ಟಿನಿಂದ ನಿಂತು ಹೋಗಿದ್ದು, ನಂತರ ದಕ್ಷಿಣ ಭಾರತದ...
ವಿರಾಟ್ ಚಿತ್ರದ ಸ್ಟಿಲ್
ವಿರಾಟ್ ಚಿತ್ರದ ಸ್ಟಿಲ್

ಮೂರ ವರ್ಷಗಳ ಹಿಂದೆ ಸೆಟ್ಟೇರಿದ್ದ ದರ್ಶನ್ ಅಭಿನಯದ ಹೆಚ್. ವಾಸು ನಿರ್ದೇಶನದ ವಿರಾಟ್ ಚಿತ್ರ ಹಣಕಾಸು ಮುಗ್ಗಟ್ಟಿನಿಂದ ನಿಂತು ಹೋಗಿದ್ದು, ನಂತರ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಿ. ಕಲ್ಯಾಣ್ ವಿರಾಟ್ ಚಿತ್ರ ನಿರ್ಮಾಣ ಕೈಗೆತ್ತಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ಸಂಗತಿ.

ವಿರಾಟ್ ಚಿತ್ರಕ್ಕಾಗಿ ದರ್ಶನ್ ಹತ್ತು ದಿನಗಳ ಕಾಲ್ ಶೀಟ್ ನೀಡಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಹಳೆಯ ಚಿತ್ರ ಶೇಕಡ 70 ರಷ್ಟು ಚಿತ್ತೀಕರಣ ಮುಕ್ತಾಯಗೊಂಡಿತ್ತು. ಈ ಮೊದಲೇ ಚಿತ್ರೀಕರಣಗೊಂಡಿದ್ದ ಚಿತ್ರದ ದೃಶ್ಯಕ್ಕೂ ಈಗಿನ ದರ್ಶನ್ ಗೂ ಕೆಲ ಬದಲಾವಣೆಗಳಾಗಿದ್ದು, ಹೊಸ ಮ್ಯಾನರೀಸಂಗೆ ತಕ್ಕಂತೆ ಚಿತ್ರೀಕರಣ ಮಾಡಲಾಗುತ್ತಿದೆ.

ಈ ನಡುವೆ ಚಿತ್ರದ ಕುರಿತಾಗಿ ಹೊಸ ನಿರ್ಮಾಪಕರಿಗೆ ದರ್ಶನ್ ಕವಿ ಮಾತು ಹೇಳಿದ್ದಾರೆ. ನಿಂತು ಹೋಗಿದ್ದ ವಿರಾಟ್ ಚಿತ್ರ ಮುಂದುವರೆಸಲು ಕಲ್ಯಾಣ್ ಇಚ್ಚಿಸಿರುವುದು ಸಂತಸದ ಸಂಗತಿ. ಆದರೆ ಚಿತ್ರದ ಮೂಲ ನಿರ್ಮಾಪಕರು ವಿರಾಟ್ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಮಾರಿ ಹಣ ತೆಗೆದುಕೊಂಡಿದ್ದಾರೆ. ಜೊತೆಗೆ ಚಿತ್ರದ ನಿರ್ಮಾಣ ವೆಚ್ಚ ಇವತ್ತಿಗೂ ಆವತ್ತಿಗೂ ಇಮ್ಮಡಿಯಾಗಿದೆ. ಮೊದಲು ಚಿತ್ರದ ಬಜೆಟ್ 8 ಕೋಟಿ ಇತ್ತು ಹೀಗ 15 ಕೋಟಿ ಆಗಿದೆ. ಒಂದು ವೇಳೆ ಚಿತ್ರ ಅಷ್ಟು ಮೊತ್ತದ ಹಣವನ್ನು ಹಿಂಪಡೆಯುವಲ್ಲಿ ಸೋತರೆ ನನ್ನನ್ನು ನಿಂದಿಸುವಂತಿಲ್ಲ ಎಂದು ಹೇಳಿದ್ದಾರೆ.

ಒಂದು ಚಿತ್ರ ನಿರ್ಮಿಸಿರುವ ಅನುಭವವಿರುವ ಕಲ್ಯಾಣ್ "ಉಪಗ್ರಹ ಹಕ್ಕುಗಳಿಗಾಗಿ ಸಿನಿಮಾ ನಿರ್ಮಿಸುವುದು ನನಗೆ ಬೇಕಿಲ್ಲ, ಪ್ರೀತಿಯಿಂದ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದೇನೆ ನಾನು ಇದರಲ್ಲಿ ಗೆಲ್ಲುತ್ತೇನೆ ಎನ್ನುವ ಭರವಸೆಯಿದೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com