'ಎರಡನೇ ಸಲ' ಸಂಗೀತಾ ಭಟ್ ಅದೃಷ್ಟ ಪರೀಕ್ಷೆ

ಪ್ರೀತಿ ಗೀತಿ ಇತ್ಯಾದಿ ನಾಯಕಿ ಸಂಗೀತಾ ಭಟ್ ಸ್ಯಾಂಡಲ್ ವುಡ್ ನ ನಿರ್ದೇಶಕ ಗುರುಪ್ರಸಾದ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದಾರೆ.
ಸಂಗೀತಾ ಭಟ್
ಸಂಗೀತಾ ಭಟ್
Updated on

ಪ್ರೀತಿ ಗೀತಿ ಇತ್ಯಾದಿ ಚಿತ್ರದ ನಾಯಕಿ ಸಂಗೀತಾ ಭಟ್  ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಭಾಗ್ಯವಂತರು, ಚಂದ್ರಚಕೋರಿ ದಾರಾವಾಹಿಗಳಲ್ಲೂ ನಟಿಸಿರುವ ಸಂಗೀತಾ,  ಪವನ್ ಒಡೆಯರ್ ಅವರೊಂದಿಗೆ ಪ್ರೀತಿ ಗೀತಿ ಇತ್ಯಾದಿ ಚಿತ್ರದಲ್ಲಿ ನಟಿಸಿದ್ದ ಬಳಿಕ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದರು.

ಗುರುಪ್ರಸಾದ್ ನಿರ್ದೇಶನದ ಎರಡನೇ ಸಲ ಚಿತ್ರದಲ್ಲಿ ಧನಂಜಯ್ ಅವರೊಂದಿಗೆ ಸಂಗೀತ ನಟಿಸಲಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿರುವ ಸಂಗೀತಾ,  ಸ್ಕ್ರಿಪ್ಟ್ ನ್ನು ಇನ್ನೂ ನೋಡಿಲ್ಲ ಆದರೆ ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದೇ ಅತ್ಯಂತ ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈ ಚಿತ್ರ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಲಿದೆ ಎಂದು ಸಂಗೀತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.   

ಕೇವಲ ಗ್ಲ್ಯಾಮರ್ ಗೊಂಬೆಯಾಗಿರುವುದಕ್ಕೆ ಇಷ್ಟ ಪಡುವುದಿಲ್ಲ, ಮಾಡೆಲಿಂಗ್ ಕ್ಷೇತ್ರದಿಂದ ಬಂದಿದ್ದರೂ ಈ ವರೆಗೂ ನಟನೆ ಮಾಡಿರುವ ದಾರಾವಾಹಿಗಳಲ್ಲಿ ಸಾಕಷ್ಟು ಕಲಿತಿದ್ದೇನೆ ಎಂದಿದ್ದಾರೆ. ಎರಡನೇ ಸಲ ಚಿತ್ರದಲ್ಲಿ ನಟಿಸಲು ಅವಕಾಶ ದೊರೆತಿದ್ದು ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲೈಫ್ ಸೂಪರ್ ಗುರು ರಿಯಾಲಿಟಿ ಶೋ ದಿಂದ ಎಂಬುದು ನಟಿ ಸಂಗೀತಾ ಅಭಿಪ್ರಾಯ. "ಶೋ ವೇಳೆ ಆಂಕರ್ ಜೊತೆ ಅಥವಾ ತೀರ್ಪುಗಾರರೊಂದಿಗೆ ಮಾತನಾಡಲು ಅವಕಾಶ ನೀಡಿರಲಿಲ್ಲ. ಆದರೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಯಲ್ಲಿರಬೇಕಾದರೆ ನನ್ನನ್ನು ನೋಡಲು ಬಂದಿದ್ದ ನಿರ್ದೇಶಕ ಗುರುಪ್ರಸಾದ್, ಚಿತ್ರದಲ್ಲಿ ನಟಿಸಬೇಕಾದರೆ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಇದಾದ 4 -5 ತಿಂಗಳಲ್ಲಿ ನಿರ್ದೇಶಕ ಗುರುಪ್ರಸಾದ್  ಅವರನ್ನು ಭೇಟಿ ಮಾಡಿದೆ ನಂತರ ಎರಡನೇ ಸಲ ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು ಎಂದು ಸಂಗೀತ ತಿಳಿಸಿದ್ದಾರೆ.

ಚಿತ್ರದ ಫೋಟೋ ಶೂಟ್ ಕುತೂಹಲಕಾರಿಯಾಗಿತ್ತು ಎಂದಿರುವ ಸಂಗೀತಾ, ರೊಮ್ಯಾನ್ಸ್ ಹಾಗೂ ಶೋಕ ಸನ್ನಿವೇಶಗಳ ಫೋಟೋಶೂಟ್ ನಡೆದಿದೆ ಎಂದು ತಿಳಿಸಿದ್ದಾರೆ. ತಮಿಳು ಚಿತ್ರದ ಮೂಲಕ ಸಂಗೀತಾ ಚಿತ್ರ ರಂಗ ಪ್ರವೇಶಿಸಿದ್ದಾರೆ. ಕನ್ನಡದಲ್ಲಿ ಮಾಮು ಟಿ ಅಂಗಡಿ, ಕಿಸ್ಮತ್, ಪ್ರೀತಿ ಗೀತಿ ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರೀತಿ ಗೀತಿ ಇತ್ಯಾದಿ ಚಿತ್ರ ಹೆಚ್ಚು ಜನರ್ಪಿಯತೆ ತಂದುಕೊಡಲಿಲ್ಲ. ಸದ್ಯದಲೇ ಕಿಸ್ಮತ್ ಚಿತ್ರ ತೆರೆ ಕಾರಣಲಿದ್ದು ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಸಂಗೀತಾ ಕಾಯುತ್ತಿದ್ದಾರೆ. ಇದೇ ವೇಳೆ ತಮಿಳು ಚಿತ್ರ ಬಬ್ಬಲ್ ಗಾಮ್ ನಲ್ಲೂ ಸಂಗೀತಾ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com