ಹುಬ್ಬಳ್ಳಿ, ಬೆಳಗಾವಿಯಲ್ಲಿ 'ದೊಡ್ಮನೆ ಹುಡುಗ' ಚಿತ್ರೀಕರಣ

ಬೆಳಗಾವಿಯಲ್ಲಿ ನಿಗದಿಯಾಗಿದ್ದ ಚಿತ್ರೀಕರಣ ಮುಕ್ತಾಯವಾಗುವ ಮುನ್ನವೇ ಚಿತ್ರ ತಂಡ ಬೆಂಗಳೂರಿಗೆ ವಾಪಸ್ಸಾಗಿದೆ.
ಹುಬ್ಬಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್
ಹುಬ್ಬಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್
Updated on: 

ಹುಬ್ಬಳ್ಳಿ ಭಾಗದಲ್ಲಿ ನಡೆಯಬೇಕಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್ ಅಭಿನಯದ ದೊಡ್ಮನೆ ಹುಡುಗ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಬೆಳಗಾವಿಯಲ್ಲಿ ನಿಗದಿಯಾಗಿದ್ದ ಚಿತ್ರೀಕರಣ ಮುಕ್ತಾಯವಾಗುವ ಮುನ್ನವೇ ಚಿತ್ರ ತಂಡ ಬೆಂಗಳೂರಿಗೆ ವಾಪಸ್ಸಾಗಿದೆ.

ಹುಬ್ಬಳ್ಳಿಯಲ್ಲಿ 4 ದಿನಗಳ ಚಿತ್ರೀಕರಣದ ಬಳಿಕ, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 3 ದಿನಗಳು ಸಾಹಸ ದೃಶ್ಯಗಳ ಚಿತ್ರೀಕರಣವಿತ್ತು ಆದರೆ ಮಳೆ ಕಾರಣದಿಂದಾಗಿ ಚಿತ್ರೀಕರಣ ಸಾಧ್ಯವಾಗದೇ ಚಿತ್ರ ತಂಡ ವಾಪಸ್ ಬೆಂಗಳೂರಿಗೆ ಬಂದಿದೆ. ಬೆಂಗಳೂರು ಹಾಗೂ ಮೈಸೂರು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಅಂಬರೀಷ್ ಹಾಗೂ ಸುಮಲತಾ ನಟಿಸುತ್ತಿರುವ ಭಾಗದ ಚಿತ್ರೀಕರಣ ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯಲಿದ್ದು, ಯುವ ನಟರಲ್ಲಿರುವುದಕ್ಕಿಂತಲೂ ಹೆಚ್ಚು ಉತ್ಸಾಹ ಹಿರಿಯ ನಟರಾದ ಅಂಬರೀಷ್ ಹಾಗೂ ಸುಮಲತಾ ಅವರಲ್ಲಿದೆ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ.  ಇನ್ನು ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆದ ವೇಳೆ  ಅಭಿಮಾನಿಗಳು ತೋರಿದ ಪ್ರೀತಿಗೆ ಸೂರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಜವಾದ ಅಭಿಮಾನಿಗಳಿರುವುದು ಕಾಸ್ಮೋಪಾಲಿಟನ್ ಮಲ್ಟಿಪ್ಲೆಕ್ಸ್ ಹೊರಭಾಗದಲ್ಲಿ ಎಂಬುದು ದೊಡ್ಮನೆ ಹುಡುಗ ನಿರ್ದೇಶಕ ಸೂರಿ ಅಭಿಪ್ರಾಯ. ಬೆಳಿಗ್ಗೆ 9 :30 ಕ್ಕೆ ಚಿತ್ರೀಕರಣ ನೋಡಲು ಬರುತ್ತಿದ್ದ ಅಭಿಮಾನಿಗಳು ಮಧ್ಯ ರಾತ್ರಿವರೆಗೂ ಇರುತ್ತಿದ್ದರು, ಅವರ ಈ ಪ್ರೋತ್ಸಾಹವೇ ನಮಗೆ ಸಿನಿಮಾ ಮಾಡಲು ಉತ್ತೇಜನ ಎಂದು ಸೂರಿ ಹೇಳಿದ್ದಾರೆ.         

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com