'ಪ್ರಜ್ವಲಿಸಲು' ಕಾಯುತ್ತಿರುವ ಪ್ರಜ್ವಲ್

ಸೋಲು ಬೆಂಬಿಡದೆ ಕಾಡುತ್ತಿರುವಾಗ ಪ್ರಜ್ವಲ್ ಮಾನಸಿಕವಾಗಿ ಸದೃಢರಾಗಿದ್ದಾರೆ. ಈ ಪ್ರತಿಭಾವಂತ ನಟ ವೃತ್ತಿ ಜೀವನದ ಬಗ್ಗೆ ಆತ್ಮಾವಲೋಕನ ಮಾಡುತ್ತಿದ್ದಾರೆ.
ಅರ್ಜುನ ಚಿತ್ರದಲ್ಲಿ ಪ್ರಜ್ವಲ್
ಅರ್ಜುನ ಚಿತ್ರದಲ್ಲಿ ಪ್ರಜ್ವಲ್
Updated on

ಒಬ್ಬ ನಟನ ವೃತ್ತಿ ಜೀವನದಲ್ಲಿ ಗೆಲುವೇ ಕೊನೆಯವರೆಗೂ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಏರಿಳಿತಗಳನ್ನು ಕಾಣುತ್ತಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ರೊಮ್ಯಾಂಟಿಕ್ ಬಾಯ್ ಆಗಿ ಕಾಣಿಸಿದ ತಮ್ಮ ಮೊದಲ ಚಿತ್ರ ಸಿಕ್ಸರ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಆ ನಂತರ ಒಂದೆರಡು ಚಿತ್ರಗಳಲ್ಲಿ ಗೆಲುವಿನ ರುಚಿ ಕಂಡಿದ್ದ ಪ್ರಜ್ವಲ್ ಗೆ ನಂತರ ಕಾದಿದ್ದು ಸತತ ನಿರಾಶೆಯೇ. ಸೋಲು ಬೆಂಬಿಡದೆ ಕಾಡುತ್ತಿರುವಾಗ ಪ್ರಜ್ವಲ್ ಮಾನಸಿಕವಾಗಿ ಸದೃಢರಾಗಿದ್ದಾರೆ. ಈ ಪ್ರತಿಭಾ ನಟ ವೃತ್ತಿ ಜೀವನದ ಬಗ್ಗೆ ಆತ್ಮಾವಲೋಕನ ಮಾಡುತ್ತಿದ್ದಾರೆ.

"ನಾನೀಗ ಸ್ಯಾಂಡಲ್ ವುಡ್ ನಲ್ಲಿ ಹೊಸ ಪಯಣವನ್ನು ಆರಂಭಿಸಬೇಕೆಂದಿದ್ದೇನೆ. ಒಟ್ಟೊಟ್ಟಿಗೆ ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದು ಸೋಲಿಗೆ ಕಾರಣನೆನ್ನಿಸುತ್ತಿದೆ. ಹೊಸ ನಿರ್ದೇಶಕರ ಚಿತ್ರಗಳನ್ನು ಒಪ್ಪಿಕೊಂಡಿದ್ದು ಇನ್ನೊಂದು ಕಾರಣವಾಗಿರಬಹುದು. ಇನ್ನು ಮುಂದೆ ಒಮ್ಮೆಗೆ ಒಂದು ಸಿನಿಮಾವನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ಇದರಿಂದ ಆ ಚಿತ್ರದ ಮೇಲೆ ಹೆಚ್ಚು ಗಮನಹರಿಸಿ ಉತ್ತಮ ನಟನೆ ನೀಡಬಹುದು'' ಎನ್ನುತ್ತಾರೆ ಪ್ರಜ್ವಲ್.

ಅವರ ಭುಜಂಗ ನಂತರ ಅರ್ಜುನ ಚಿತ್ರ  ತೆರೆಗೆ ಬರಲು ಸಜ್ಜಾಗಿದೆ.ಈ ಬಗ್ಗೆ ಮಾತಾಡಿದ ದೇವರಾಜ್, ನನ್ನ ವೃತ್ತಿ ಜೀವನದಲ್ಲಿ ಇದೊಂದು ಸವಾಲಿನ ಪಾತ್ರ. ನನ್ನ ತಂದೆ ದೇವರಾಜ್ ಅವರ ಜೊತೆ ನಟಿಸಿದ್ದು, ಅದ್ಬುತ ಅನುಭವ ನೀಡಿದೆ. ಸಾಹಸಮಯ ಮತ್ತು ಕೊಲೆ ರಹಸ್ಯವನ್ನು ಒಳಗೊಂಡ ಈ ಚಿತ್ರದಲ್ಲಿ ಪ್ರೇಕ್ಷಕರು ಹೊಸ ಪ್ರಜ್ವಲ್ ನನ್ನು ಕಾಣಲಿದ್ದಾರೆ. ಭುಜಂಗ ಚಿತ್ರದಲ್ಲಿ ಕೂಡ ಪಕ್ಕದ ಮನೆಯ ಹುಡುಗನ ಇಮೇಜ್ ಕಾಣಲಿದೆ ಎಂದರು.

ಇಂದು ನಾನು ಚಿತ್ರವನ್ನು ಆರಿಸಿಕೊಳ್ಳುವಲ್ಲಿ ಚ್ಯೂಸಿಯಾಗಿದ್ದೇನೆ. ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಕಾಲಾವಕಾಶ ತೆಗೆದುಕೊಳ್ಳುತ್ತೇನೆ. ಇದನ್ನು ನಾನು ಸೆಕೆಂಡ್ ಇನ್ನಿಂಗ್ಸ್ ಎಂದು ಕರೆಯಲು ಇಷ್ಟಪಡುವುದಿಲ್ಲ, ಬದಲಾಗಿ ನನ್ನ ಆಯ್ಕೆಯಲ್ಲಿ ಹೊಸ ಹಾದಿ ಎಂದು ಕರೆಯುತ್ತೇನೆ ಎನ್ನುತ್ತಾರೆ ಪ್ರಜ್ವಲ್. 

ಇದಾದ ಬಳಿಕ ಪ್ರಜ್ವಲ್ ಶೃತಿ ಹರಿಹರನ್ ಅವರೊಂದಿಗೆ ಸತೀಶ್ ಪ್ರಧಾನ್ ಅವರ ನಿರ್ದೇಶನದ 'ಮಾದ ಮತ್ತು ಮಾನಸಿ' ಚಿತ್ರದಲ್ಲಿ ನಟಿಸಲಿದ್ದಾರೆ. ಖ್ಯಾತ ಸಂಗೀತಗಾರ ಮನೋಮೂರ್ತಿಯವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com