
ಮುಂಬೈ: 'ಭೋಪಾಲ್: ಎ ಪ್ರಯರ್ ಫಾರ್ ರೈನ್' ಸಿನೆಮಾದಲ್ಲಿ ಹಾಲಿವುಡ್ ನಟರಾದ ಮಾರ್ಟಿನ್ ಶೀನ್ ಮತ್ತು ಮಿಸ್ಕಾ ಬ್ಯಾರ್ಟನ್ ಅವರೊಂದಿಗೆ ಕಾಣಿಸಿಕೊಂಡ ನಟ ರಾಜಪಾಲ್ ಯಾದವ್ ಅವರು ಎರಡು ಅಂತರಾಷ್ಟ್ರೀಯ ಸಿನೆಮಾಗಳಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
"ನಾನು ಎರಡು ಹಾಲಿವುಡ್ ಯೋಜನೆಗಳಲ್ಲಿ ಪ್ರಮುಖ ಪಾತ್ರದಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ" ಎಂದು ಪ್ರಚಾರ ಸಭೆಯೊಂದರಲ್ಲಿ ತಿಳಿಸಿದ್ದಾರೆ.
'ಡರ್ನಾ ಮನಾ ಹೈ'. ಡರ್ನಾ ಜರೂರಿ ಹೈ' ಮತ್ತು 'ಮೈ ಮಾಧುರಿ ದೀಕ್ಷಿತ್ ಬನ್ನಾ ಚಾಹ್ತಿ ಹೂಂ" ಇತ್ಯಾದಿ ಬಾಲಿವುಡ್ ಸಿನೆಮಾಗಳಲ್ಲೂ ರಾಜ್ಪಾಲ್ ಕಾಣಿಸಿಕೊಂಡಿದ್ದಾರೆ.
"ನಾನು ಸುಮಾರು ೧೦-೧೨ ಬಾಲಿವುಡ್ ಸಿನೆಮಾಗಳಲ್ಲೂ ನಾಯಕ ನಟ ಪಾತ್ರ ವಹಿಸುತ್ತಿದ್ದೇನೆ. ಮುಂದಿನ ೨-೩ ವರ್ಷಗಳಲ್ಲಿ ನನ್ನ ೧೭-೧೮ ಸಿನೆಮಾಗಳು ಬಿಡುಗಡೆಯಾಗಲಿವೆ" ಎಂದು ತಿಳಿಸಿದ್ದು ತಮ್ಮ ತೆಲುಗು ಸಿನೆಮಾ 'ಕಿಕ್ ೨' ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದಿದ್ದಾರೆ.
"ನಾನು ಹಿಂದಿ ಮತ್ತು ಕನ್ನಡದಲ್ಲಿ 'ಅಮ್ಮ' ಸಿನೆಮಾದಲ್ಲಿ ಅಭಿನಯಿಸಿದ್ದೇನೆ. ಒಂದು ತಮಿಳು ಸಿನೆಮಾದಲ್ಲಿ ಕೂಡ ನಟಿಸಲಿದ್ದೇನೆ" ಎಂದಿದ್ದರೆ ರಾಜ್ಪಾಲ್.
Advertisement