ಹೋಳಿ ಹುಣ್ಣಿಮೆಯಂದು ಸೆಟ್ಟೇರಿದ `ದೊಡ್ಮನೆ ಹುಡ್ಗ’

ಚಿತ್ರದ ಮುಹೂರ್ತ ಸಮಾರಂಭ
ಚಿತ್ರದ ಮುಹೂರ್ತ ಸಮಾರಂಭ
Updated on

ಅಜಯ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಗೋವಿಂದು ಅವರು ನಿರ್ಮಿಸುತ್ತಿರುವ ಪುನೀತ್‍ ರಾಜಕುಮಾರ್ ಅಭಿನಯದ `ದೊಡ್ಮನೆ ಹುಡ್ಗ’ ಚಿತ್ರದ ಮುಹೂರ್ತ ಹೋಳಿಹುಣ್ಣಿಮೆಯ ಶುಭದಿನದಂದು ನೆರವೇರಿತು.

ಪುನೀತ್‍ರಾಜಕುಮಾರ್ ಅವರ ಮನೆಯ ಮುಂದಿರುವ ಗಣಪತಿಗೆ ಪೂಜೆ ಸಲ್ಲಿಸುವುದರೊಂದಿಗೆ ಮುಹೂರ್ತ ಸಮಾರಂಭ ಆರಂಭವಾಯಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಆರಂಭ ಫಲಕ ತೋರಿದರು. ಪಾರ್ವತಮ್ಮ ರಾಜಕುಮಾರ್, ಸೆಂಚುರಿಸ್ಟಾರ್ ಶಿವರಾಜಕುಮಾರ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸೂರಿ ಹಾಗೂ ವಿಕಾಸ್ ಅವರು ಬರೆದಿರುವ ಕಥೆಗೆ ಸೂರಿ ಅವರೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು.ಎಸ್.ಕುಮಾರ್ ಸಂಕಲನ, ಶಶಿಧರ ಅಡಪ ಅವರ ಕಲಾ ನಿರ್ದೇಶನವಿದೆ. ವಿ.ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ.

ರಾಧಿಕಾ ಪಂಡಿತ್, ರೆಬಲ್‍ಸ್ಟಾರ್ ಅಂಬರೀಶ್, ಸುಮಲತ ಅಂಬರೀಶ್, ಭಾರತಿ ವಿಷ್ಣುವರ್ಧನ, ಶ್ರೀನಿವಾಸಮೂರ್ತಿ, ಅವಿನಾಶ್, ರಂಗಾಯಣ ರಘು, ರವಿಶಂಕರ್, ಉದಯ್, ಚಿಕ್ಕಣ್ಣ, ಸಂತೋಷ್ ರಾಜವರ್ಧನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com