ಸೈಕಲ್ ಹೊಡೆಯುತ್ತಿರುವ ಸಲ್ಮಾನ್ ಖಾನ್ ಮತ್ತು ಪರಿಣೀತಿ ಚೋಪ್ರಾ
ಸೈಕಲ್ ಹೊಡೆಯುತ್ತಿರುವ ಸಲ್ಮಾನ್ ಖಾನ್ ಮತ್ತು ಪರಿಣೀತಿ ಚೋಪ್ರಾ

ಸೈಕಲ್ ಹೊಡೆದ ಸಲ್ಮಾನ್ ಮತ್ತು ಪರಿಣೀತಿ ಚೋಪ್ರಾ; ತಾರೆಯರ ಕ್ಲಿಕ್ಸ್

ಬಾಲಿವುಡ್ ತಾರೆ ಸಲ್ಮಾನ್ ಖಾನ್ ಅವರಿಗೆ ಸೈಕಲ್ ಹೊಡೆಯುವುದು ನೆಚ್ಚಿನ ಹವ್ಯಾಸ ಮತ್ತು ಮುಂಬೈನಲ್ಲಿ ಅವರು ಸೈಕಲ್ ತುಳಿಯುವುದನ್ನು

ಮುಂಬೈ: ಬಾಲಿವುಡ್ ತಾರೆ ಸಲ್ಮಾನ್ ಖಾನ್ ಅವರಿಗೆ ಸೈಕಲ್ ಹೊಡೆಯುವುದು ನೆಚ್ಚಿನ ಹವ್ಯಾಸ ಮತ್ತು ಮುಂಬೈನಲ್ಲಿ ಅವರು ಸೈಕಲ್ ತುಳಿಯುವುದನ್ನು ಸಾಮಾನ್ಯವಾಗಿ ನೋಡಬಹುದು. ಗುಜರಾತ್ ನಲ್ಲಿ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ಹಿಂದಿರುಗಿರುವ ಸಲ್ಮಾನ್ ತಮ್ಮ ನೆಚ್ಚಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾಗ, ಅವರ ಅಭಿಮಾನಿಯೊಬ್ಬರು ಇವರ ಫೋಟೊ ಕ್ಲಿಕ್ ಮಾಡಿದ್ದಾರೆ. ಭಾಂದ್ರಾದ ರಸ್ತೆಗಳಲ್ಲಿ ಸೈಕಲ್ ಹೊಡೆಯುತ್ತಿದ್ದಾಗ ಅಭಿಮಾನಿ ಕ್ಲಿಕ್ಕಿಸಿದ ಫೋಟೊ ಇದು.

ನಟಿ ಪರಿಣೀತಿ ಚೋಪ್ರಾ ತಮ್ಮ ಯೂರೋಪ್ ಪ್ರವಾಸದ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಬೆಟ್ಟಗುಡ್ಡಗಳ ರಮಣೀಯ ಸೌಂದರ್ಯವನ್ನು ಸವಿಯಲು ಸೈಕಲ್ ಸವಾರಿಯ ಮೂಲಕ ಓಡಾಡಿದ್ದನ್ನು ತಿಳಿಸಿದ್ದಾರೆ. ಯಾವುದೇ ಪ್ರದೇಶದ ಸೌಂದರ್ಯ ಸವಿಯಲು ಸೈಕಲ್ ಸವಾರಿ ಖಂಡಿತಾ ಅದ್ಭುತ ಮಾರ್ಗ!

Related Stories

No stories found.

Advertisement

X
Kannada Prabha
www.kannadaprabha.com