ಶಶಿ ಕಪೂರ್ ಗೆ ಒಲಿದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಭಾರತೀಯ ಚಲನಚಿತ್ರೋದ್ಯಮಕ್ಕೆ ಹಿರಿಯ ಬಾಲಿವುಡ್ ನಟ-ನಿರ್ಮಾಪಕ ಶಶಿಕಪೂರ್ ನೀಡಿರುವ ಕೊಡುಗೆಗಾಗಿ ೨೦೧೪ನೆ ಸಾಲಿನ ದೇಶದ ಅತ್ಯುನ್ನತ
ಶಶಿಕಪೂರ್
ಶಶಿಕಪೂರ್

ನವದೆಹಲಿ: ಭಾರತೀಯ ಚಲನಚಿತ್ರೋದ್ಯಮಕ್ಕೆ ಹಿರಿಯ ಬಾಲಿವುಡ್ ನಟ-ನಿರ್ಮಾಪಕ ಶಶಿಕಪೂರ್ ನೀಡಿರುವ ಕೊಡುಗೆಗಾಗಿ ೨೦೧೪ನೆ ಸಾಲಿನ ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿಯನ್ನು ಪಡೆಯುತ್ತಿರುವ ೪೬ ನೆ ವ್ಯಕ್ತಿ ೭೭ ವರ್ಷದ ಶಶಿಕಪೂರ್ ಮತ್ತು ಕಪೂರ್ ಕುಟುಂಬದಲ್ಲಿ ಪ್ರಶಸ್ತಿ ಪಡೆಯುತ್ತಿರುವ ಮೂರನೆ ವ್ಯಕ್ತಿ. ಶಶಿ ಅವರ ತಂದೆ ಪೃಥ್ವಿರಾಜ್ ಕಪೂರ್ (೧೯೭೧)ಮತ್ತು ಸಹೋದರ ರಾಜ್ ಕಪೂರ್ (೧೯೮೭) ಇದೆ ಪ್ರಶಸ್ತಿಯನ್ನು ಪಡೆದ ಕುಟುಂಬ ಸದಸ್ಯರು. ೧೯೬೧ರಲ್ಲಿ 'ಧರ್ಮಪುತ್ರ' ಚಲನಚಿತ್ರ ಶಶಿ ಅವರ ಚೊಚ್ಚಲ ಸಿನೆಮಾ. ನಂತರ ಈ ಹಿರಿಯ ನಟ ನೂರಾರು ಸಿನೆಮಾಗಳಲ್ಲಿ ನಟಿಸಿದ್ದಾರೆ.

ಐದು ಜನ ತೀರ್ಪುಗಾರರನ್ನು ಒಳಗೊಂಡ ಮಂಡಲಿ ಭಾರತೀಯ ಚಿತ್ರೋದ್ಯಮಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರತಿ ವರ್ಷ ನೀಡುವ ಶಿಫಾರಸ್ಸಿನ ಮೇಲೆ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತದೆ.

"೧೯೩೮ರಲ್ಲಿ ಜನಿಸಿದ ಶಶಿಕಪೂರ್, ಜನಪ್ರಿಯ ನಟ ಮತ್ತು ಬಾಲಿವುಡ್ ಸಿನೆಮಾದ ಖ್ಯಾತ ಕಪೂರ್ ಕುಟುಂಬದ ನಿರ್ಮಾಪಕ ಸದಸ್ಯ" ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

೨೧೦೦ರಲ್ಲಿ ಕಪೂರ್ ಅವರಿಗೆ ಪದ್ಮಭೂಷಣ ನೀಡಿ ಪುರಸ್ಕರಿಸಲಾಗಿತ್ತು ಹಾಗು ಇವರು ೩ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ೧೦ ಲಕ್ಷ ನಗದು ಬಹುಮಾನ ಹೊಂದಿದೆ. ಈ ಹಿಂದ ಕರ್ನಾಟಕದ ನಟ ಡಾ. ರಾಜಕುಮಾರ್ ಕೂಡ ಈ ಪ್ರಶಸ್ತಿಗೆ ಭಾಜನಾರಗಿರುವುದನ್ನು ಇಲ್ಲಿ ನೆನೆಸಿಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com