ತಾಜ್ ಮಹಲ್ ಮುಂದೆ ಮುಮ್ತಾಜ್

ಮುಮ್ತಾಜ್ ಎಂದ ಕೂಡಲೇ ಎಲ್ಲರ ಮನದಲ್ಲಿ ಮೂಡುವುದು ಸುಂದರ ತಾಜ್ ಮಹಲ್. ದೊರೆ ಶಹಜಾನ್ ತನ್ನ ಪ್ರೀತಿಯ ಮಡದಿಯ ನೆನಪಿಗಾಗಿ ಕಟ್ಟಿಸಿದ ಸುಂದರ ಸೌಧವಿದು.
ಮುಮ್ತಾಜ್ ಚಿತ್ರದ ಸ್ಟಿಲ್
ಮುಮ್ತಾಜ್ ಚಿತ್ರದ ಸ್ಟಿಲ್

ಮುಮ್ತಾಜ್ ಎಂದ ಕೂಡಲೇ ಎಲ್ಲರ ಮನದಲ್ಲಿ ಮೂಡುವುದು ಸುಂದರ ತಾಜ್ ಮಹಲ್. ದೊರೆ ಶಹಜಾನ್ ತನ್ನ ಪ್ರೀತಿಯ ಮಡದಿಯ ನೆನಪಿಗಾಗಿ ಕಟ್ಟಿಸಿದ ಸುಂದರ ಸೌಧವಿದು. ಈ ಹಿಂದೆ ದಿನೇಶ್ ಬಾಬು ಅವರ ಬಳಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿ ಅನುಭವ ಪಡೆದಿರುವ ರಾಘವ ಮುರಳಿ ಆಧುನಿಕ ಮುಮ್ತಾಜ್ ಮತ್ತು ಶಹಜಹಾನ್‍ರನ್ನು ತೆರೆಯ ಮೇಲೆ ತರುತ್ತಿದ್ದಾರೆ.

ನವಗ್ರಹ ಚಿತ್ರದಲ್ಲಿ ಕಣ್ ಕಣ್ಣ ಸಲಿಗೆ ಎಂದು ಪ್ರೇಮರಾಗ ಹಾಡಿದ್ದ ಮುದ್ದಾದ ಜೋಡಿ ಧರ್ಮ ಕೀರ್ತಿರಾಜ್ ಹಾಗೂ ಶರ್ಮಿಳಾ ಮಾಂಡ್ರೆ ಒಟ್ಟಾಗಿ ಅಭಿನಯಿಸಿರುವ ಈ ಚಿತ್ರದ ಹೆಸರು ಮುಮ್ತಾಜ್. ನಟ ದರ್ಶನ್ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ವಿಶೇಷ.

ಬೆಂಗಳೂರು, ಮೈಸೂರು. ಕೆ.ಜಿಎಫ್ ಬಲಮುರಿ, ಹಾಗೂ ಆಗ್ರಾದ ತಾಜ್ ಮಹಲ್ ಬಳಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸುಮಾರು 55 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು ತಾಜ್ ಮಹಲ್ ಮುಂಭಾಗದಲ್ಲಿ ಚಿತ್ರದ ಪ್ರಮುಖ ಭಾಗವನ್ನು ಚಿತ್ರೀಕರಿಸಲಾಗಿದೆ. ನಾಯಕನಟ ದರ್ಶನ್ ಈ ಚಿತ್ರದಲ್ಲಿ ಒಬ್ಬ ಡಾನ್ ಪಾತ್ರ ನಿರ್ವಹಿಸಿದ್ದು, ಈ ಪ್ರೇಮಿಗಳಿಬ್ಬರನ್ನೂ ಒಂದುಗೂಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಹೊಸದಾಗಿ ಪ್ರೇಮಪಾಶಕ್ಕೆ ಸಿಲುಕಿರುವವರು, ಮಾಜಿ ಪ್ರೇಮಿಗಳು, ಅಲ್ಲದೆ, ಮುಂದೆ ಪ್ರೇಮಿಗಳಾಗುವವರು ಮಾತ್ರವಲ್ಲದೆ, ಹೆತ್ತ ತಂದೆ-ತಾಯಂದಿರಿಗೂ ಚಿತ್ರ ನೋಡಿದ ಮೇಲೆ ಕಣ್ತುಂಬಿ ಬರುವುದು ನಿಶ್ಚಿತ ಎನ್ನುವ ನಿರ್ದೇಶಕರು ಸದ್ಯ ಚಿತ್ರದ ಫೋಸ್ಟ್ ಪ್ರೋಡಕ್ಷನ್ ಹಂತದಲ್ಲಿ ನಿರತರಾಗಿದ್ದಾರೆ.

ಡಬ್ಬಿಂಗ್, ಎಡಿಟಿಂಗ್ ಮುಗಿಸಿ, ರೀ ರೆಕಾರ್ಡಿಂಗ್ ಹಂತದಲ್ಲಿರುವ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯನ್ನು ಏಪ್ರಿಲ್ ಮೊದಲ ವಾರದಲ್ಲಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಆ್ಯಕ್ಷನ್ ಕಟ್ ಕ್ರಿಯೇಷನ್ಸ್ ಅಡಿಯಲ್ಲಿ ಕೆ.ಎನ್. ನರಸಿಂಹಮೂರ್ತಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಕೆ. ಪ್ರವೀಣ್ ಅವರ ಸಂಗೀತ ಸಂಯೋಜನೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com