
ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಐರಾವತ ಚಿತ್ರದಲ್ಲಿ ಮಗ ವಿನೀಶ್ ನಟಿಸುತ್ತಿದ್ದು, ಈ ಮೂಲಕ ತೂಗುದೀಪ ಶ್ರೀನಿವಾಸ್ ಕುಟುಂಬದ ಮೂರನೇ ಕುಡಿ ಚಿತ್ರರಂಗಕ್ಕೆ ಕಾಲಿಟ್ಟಂತಾಗಿದೆ.
ಐರಾವತ ಚಿತ್ರವನ್ನು ಎಪಿ ಅರ್ಜುನ್ ನಿರ್ದೇಶಿಸುತ್ತಿದ್ದು ದರ್ಶನ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಮಗನ ಸಹ ಬಣ್ಣ ಹಚ್ಚಲಿದ್ದಾನೆ. ಈ ಇಬ್ಬರ ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ. ಚಿತ್ರದಲ್ಲೂ ವಿನೀಶ್, ಮಗನ ಪಾತ್ರದಲ್ಲಿ ಅಭಿನಯಿಸಿರಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.
ದರ್ಶನ್ ಹಾಗೂ ಅವರ ಪುತ್ರ ವಿನೀಶ್ ಪೊಲೀಸ್ ಅಧಿಕಾರಿಗಳ ಸಮವಸ್ತ್ರದಲ್ಲಿರುವ ವಿಡಿಯೋ ಸಾಮಾಜಿಕ ಜಾಲ ತಾಣ ಯೂ ಟ್ಯೂಬ್ ನಲ್ಲೂ ಹರಿದಾಡುತ್ತಿದ್ದು, ದರ್ಶನ್ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿಸಿದೆ.
Advertisement