'ಗೇಮ್' ಗಾಗಿ ಚಿತ್ರರಂಗಕ್ಕೆ ಹಿಂದಿರುಗಿದ ಮನಿಷಾ ಕೊಯಿರಾಲಾ

ದೀರ್ಘ ವಿರಾಮದ ನಂತರ ಮನಿಷಾ ಕೊಯಿರಾಲ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. ಎ ಎಂ ಆರ್ ರಮೇಶ್ ಅವರ 'ಗೇಮ್' ಸಿನೆಮಾದ
ಮನಿಷಾ ಕೊಯಿರಾಲ
ಮನಿಷಾ ಕೊಯಿರಾಲ
Updated on

ಬೆಂಗಳೂರು: ದೀರ್ಘ ವಿರಾಮದ ನಂತರ ಮನಿಷಾ ಕೊಯಿರಾಲ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. ಎ ಎಂ ಆರ್ ರಮೇಶ್ ಅವರ 'ಗೇಮ್' ಸಿನೆಮಾದ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದಾರೆ. ಗೇಮ್ ಸಿನೆಮಾ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಮನಿಷಾ ಅವರ ದೀರ್ಘ ಕಾಲದ ವಿರಾಮದ ನಂತರವೂ ಅವರ ನಟನೆ ಅದ್ಭುತ ಎಂದಿರುವ ರಮೇಶ್ "ಮನಿಷಾ ಪಾತ್ರದ ಆಳಕ್ಕೆ ಇಳಿಯುತ್ತಾರೆ. ಪಾತ್ರಕ್ಕೆ ತಕ್ಕನಾಗಿ ಬದಲಾಗುತ್ತಾರೆ. ಅವರ ಪಾತ್ರ ಸ್ವಲ್ಪ ಋಣಾತ್ಮಕವಾದದ್ದು" ಎಂದಿದ್ದಾರೆ. ೩-೪ ವರ್ಷದ ನಂತರ ಸಿನೆಮಾಗೆ ಹಿಂದಿರುಗಿದ್ದರು ಅವರ ಸೊಬಗಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುತ್ತಾರೆ ರಮೇಶ್.

ಸಹನಟರಾದ ಅರ್ಜುನ್ ಸರ್ಜಾ ಮತ್ತು ಶ್ಯಾಮ್ ಜೊತೆ ಮೊದಲ ಸುತ್ತಿನ ನಟನೆ ಮುಗಿಸಿರುವ ಮನಿಷಾ, ಬೆಂಗಳೂರಿನ ತಂಡವನ್ನು ಸದ್ಯದಲ್ಲೇ ಸೇರಿಕೊಳ್ಳಲಿದ್ದಾರೆ.

ಚನ್ನೈನಲ್ಲಿ ಕಳೆದ ೧೭ ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ, ಚಿತ್ರೀಕರಣಕ್ಕಾಗಿ ಫಾರೆನ್ಸಿಕ್ ಲ್ಯಾಬ್ ಒಂದನ್ನು ಸೆಟ್ ನಲ್ಲಿ ನಿರ್ಮಿಸಲು ೪೫ ಲಕ್ಷ ಖರ್ಜಾಗಿದೆ ಎನ್ನುತ್ತಾರೆ ರಮೇಶ್. "ನಾನು ಈ ಹಿಂದೆಯೇ ಹೇಳಿರುವಂತೆ ಗೇಮ್ ನಿಜ ಘಟನೆ ಆಧಾರಿತ ಸಿನೆಮಾ. ಇದಕ್ಕೂ ಹೆಚ್ಚಿನ ಗುಟ್ಟನ್ನು ಬಿಚ್ಚಿಡಲಾರೆ. ಇಲ್ಲಿ ಇನ್ನೂ ಎರಡು ದಿನದವರೆಗೆ ಚಿತ್ರೀಕರಣ ನಡೆಸಿ ಏಪ್ರಿಲ್ ೧೨ ರಿಂದ ಬೆಂಗಳೂರಿಗೆ ಬರಲಿದ್ದೇವೆ" ಎಂದು ರಮೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com