
ಮುಂಬೈ: 2002ರ ಗುದ್ದೋಡು ಪ್ರಕರಣ ಸಂಬಂಧ ಜಾಮೀನು ಸಿಗುತ್ತಿದ್ದಂತೆ ಬಜರಂಗಿ ಭಾಯಿಜಾನ್ ಚಿತ್ರದ ಚಿತ್ರೀಕರಣಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಕಾಶ್ಮೀರಕ್ಕೆ ತೆರಳಲಿದ್ದಾರೆ ಎಂದು ವರದಿಗಳು ತಿಳಿಸಿದೆ.
13 ವರ್ಷಗಳ ಹಿಂದಿನ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ 5 ವರ್ಷಗಳ ಜೈಲುಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಅಮಾನತುಗೊಳಿಸಿ ಕಾಯಂ ಜಾಮೀನು ನೀಡಿದ ಬೆನ್ನಲ್ಲೇ ಸಲ್ಮಾನ್ ಇಂದು ಬಜರಂಗಿ ಭಾಯಿಜಾನ್ ಚಿತ್ರೀಕರಣಕ್ಕಾಗಿ ಸಲ್ಮಾನ್ ಮತ್ತು ತಂಡ ಕಾಶ್ಮೀರಕ್ಕೆ ತೆರಳಲಿದೆ ಎಂದು ಮೂಲಗಳು ಹೇಳಿವೆ.
ಜಾಮೀನಿಗಾಗಿ 30 ಸಾವಿರ ಶ್ಯೂರಿಟಿ ನೀಡಿ, ಪಾಸ್ ಫೋರ್ಟ್ ಅನ್ನು ನ್ಯಾಯಾಲಯಕ್ಕೆ ಕೊಟ್ಟು ಜಾಮೀನು ಪಡೆಯುವಂತೆ ಹೈಕೋರ್ಟ್ ಸೂಚಿಸಿತ್ತು. ಕೆಲಸ ನಿಮಿತ್ತ ವಿದೇಶಕ್ಕೆ ತೆರಳಬೇಕಿದ್ದರೆ, ಕೋರ್ಟ್ ಅನುಮತಿ ಪಡೆದು ಪ್ರಯಾಣಿಸಬೇಕು ಎಂದು ಸೂಚಿಸಿತ್ತು.
ಹೈಕೋರ್ಟ್ ನಿಂದ ಜಾಮೀನು ಸಿಗುತ್ತಿದ್ದಂತೆ ಶುಕ್ರವಾರ ಸಂಜೆ ಸೆಷನ್ಸ್ ಕೋರ್ಟ್ ಗೆ ಶರಣಾದ ಸಲ್ಮಾನ್ ಖಾನ್ 30 ಸಾವಿರ ರು. ಶ್ಯೂರಿಟಿ ನೀಡಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿಗೊಳಿಸಿದ್ದರು.
Advertisement