
ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಹಾಗೂ ಹಾಟ್ ಬೆಡಗಿ ಸನ್ನಿ ಲಿಯೋನ್ ಇಬ್ಬರು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮುಂದಿನ ಚಿತ್ರ ಲವ್ ಯು ಅಲಿಯಾದಲ್ಲಿ ನಟಿಸಲಿದ್ದಾರಂತೆ.
ಸುದೀಪ್ ಹಾಗೂ ಸನ್ನಿ ಲಿಯೋನ್ ಚಿತ್ರದಲ್ಲಿ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುವುದಿಲ್ಲ ಬೇರೆ ಬೇರೆ ಸನ್ನಿವೇಶಗಳಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಇದುವರೆಗೂ ಸ್ಯಾಂಡಲ್ ವುಡ್ ನ ಅನೇಕ ಚಿತ್ರಗಳ ಹಾಡುಗಳಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾಳೆ. ಆದರೆ ಲವ್ ಯು ಅಲಿಯಾ ಚಿತ್ರದಲ್ಲಿ ಹಾಡಿನ ಜೊತೆಗೆ ಚಿಕ್ಕ ಪಾತ್ರದಲ್ಲಿಯೂ ನಟಿಸಲಿದ್ದಾಳಂತೆ.
ಕನ್ನಡದಲ್ಲಿ ನಟನೆಯನ್ನು ಸನ್ನಿ ಲಿಯೋನ್ ಸವಾಲಾಗಿ ಸ್ವೀಕರಿಸಿದ್ದಾಳಂತೆ.
ಬಾಲಿವುಡ್ ನ ಎಕ್ ಪೆಹೆಲಿ ಲೀಲಾ ಚಿತ್ರದಲ್ಲಿ ಆಕೆಯ ನಟನೆ ನೋಡಿ ಇಂದ್ರಜಿತ್ ಲಂಕೇಶ್ ಪ್ರಬಾವಿತರಾಗಿದ್ದಾರಂತೆ. ಜೂನ್ ನಲ್ಲಿ ಸನ್ನಿ ಲಿಯೋನ್ ಪಾತ್ರದ ಚಿತ್ರೀಕರಣ ನಡೆಯಲಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
Advertisement