
ನವದೆಹಲಿ: ಕಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಭಾರತೀಯ ನಿರ್ದೇಶಕ ನೀರಜ್ ಘಯ್ ವನ್ ಅವರ ಮಸಾನ್ ಚಿತ್ರಕ್ಕೆ ಎರಡು ಪ್ರಶಸ್ತಿಗಳು ಲಭಿಸಿವೆ.
ರಿಚಾ ಚಡ್ಡಾ, ಸಂಜಯ್ ಮಿಶ್ರಾ, ವಿಕಿ ಕುಶಾಲ್ ಮತ್ತು ಶ್ವೇತಾ ತಿವಾರಿ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರಕ್ಕೆ ಇಂಟರ್‍ನ್ಯಾಷನಲ್ ಜ್ಯೂರಿ ಆಫ್ ಫಿಲ್ಮ್ ಕ್ರಿಟಿಕ್ಸ್ ಹಾಗೂ ಪ್ರಾಮಿಸಿಂಗ್ ಫ್ಯೂಚರ್ ಪ್ರಶಸ್ತಿ ಸಂದಿವೆ.
ಘಯ್ ವನ್ ನಿರ್ದೇಶನದ ಮೊದಲ ಚಿತ್ರ ಇದು. ಪ್ರಶಸ್ತಿ ಸಿಕ್ಕಿದ್ದಕ್ಕೆ ಹಿರಿಯ ನಟಿ ಶಬನಾ ಆಜ್ಮಿ, ನಿರ್ದೇ ಶಕ ಅನುರಾಗ್ ಕಶ್ಯಪ್ ಸೇರಿ ಅನೇಕರು ಘಯ್ ವನ್ ಅವರಿಗೆ ಅಭಿನಂದಿಸಿದ್ದಾರೆ.
Advertisement