ಬಾಲಿವುಡ್ ನಟಿ ಹಾಗು ನೃತ್ಯ ತಾರೆ ಮಾಧುರಿ ದೀಕ್ಷಿತ್ ಅವರಿಗೆ ಹರಿದ್ವಾರ ಆಹಾರ ಮತ್ತು ಡ್ರಗ್ ನಿಯಂತ್ರಣ ಮಂಡಲಿ ಮ್ಯಾಗಿ ನೂಡಲ್ಸ್ ಪ್ರಚಾರ ಮಾಡುತ್ತಿರುವುದಕ್ಕೆ ಕಾನೂನು ನೋಟಿಸ್ ಜಾರಿ ಮಾಡಿದೆ.
ಉತ್ತರ ಪ್ರದೇಶದಲ್ಲಿ ನಡೆದ ಪರೀಕ್ಷೆಯೊಂದರಲ್ಲಿ ಮ್ಯಾಗಿ ನೂಡಲ್ಸ್ ನಲ್ಲಿ ಅಪಾಯಕಾರಿ ಮೋನೋಸೋಡಿಯಮ್ ಗ್ಲೂಟಮೇಟ್ (ಎಂ ಎಸ್ ಜಿ) ಅಂಶ ಹೆಚ್ಚು ಪ್ರಮಾಣದಲ್ಲಿ ಕಂಡುಬಂದದ್ದರಿಂದ ಆ ಉತ್ಪನ್ನದ ಘೋಷಣೆ "ರುಚಿಯೂ ಇದೆ ಆರೋಗ್ಯವು" ಎಂಬುದರ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
೧೫ ದಿನಗಳ ಒಳಗೆ ನಟಿ ಉತ್ತರಿಸದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿದುಬಂದಿದೆ.
ಮ್ಯಾಗಿ ಆರೋಗ್ಯಕ್ಕೆ ಹೇಗೆ ಒಳ್ಳೆಯದು ಮತ್ತು ಇದಕ್ಕೆ ಸಮರ್ಥನೆ ಏನು ಎಂಬುದನ್ನು ನಟಿ ಉತ್ತರಿಸಬೇಕಾಗಬಹುದು.
ಈ ಅಪಾಯಕಾರಿ ವಸ್ತುಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ವಾಂತಿ, ತಲೆನೋವು, ಹೊಟ್ಟೆ ನೋವು ಮುಂತಾದ ರೋಗಗಳನ್ನು ತರಬಲ್ಲವು ಎಂದಿದ್ದಾರೆ ಆರೋಗ್ಯ ತಜ್ಞರು. ಇದನ್ನು ಅಲ್ಲಗೆಳೆದಿರುವ ಮ್ಯಾಗಿ ಉತ್ಪನ್ನ ಸಂಸ್ಥೆ ನೆಸ್ಲೆ, ನಾವು ಮ್ಯಾಗಿ ನೂಡಲ್ಸ್ ಗೆ ಎಂ ಎಸ್ ಜಿ ಸೇರಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Advertisement