'ರೇ' ಮೂಲಕ ಹಿಂದಿರುಗಿದ ಸುನಿಲ್ ಕುಮಾರ್ ದೇಸಾಯಿ; ಥ್ರಿಲ್ ಆದ ರಮೇಶ್

ಸುದೀರ್ಘ ಕಾಲದ ನಂತರ ಮತ್ತೆ ನಿರ್ದೇಶನಕ್ಕೆ ಮರಳಿರುವ ಸುನಿಲ್ ಕುಮಾರ್ ದೇಸಾಯಿ ಕೆಲವು ದಿನಗಳ ಹಿಂದೆಯಷ್ಟೇ ಸಿನೆಮಾದ ಆಡಿಯೋ ಬಿಡುಗಡೆ ಮಾಡಿ ಮುಗಿಸಿದ್ದಾರೆ.
ಸುನಿಲ್ ಕುಮಾರ್ ದೇಸಾಯಿ
ಸುನಿಲ್ ಕುಮಾರ್ ದೇಸಾಯಿ
Updated on

ಬೆಂಗಳೂರು: ಸುದೀರ್ಘ ಕಾಲದ ನಂತರ ಮತ್ತೆ ನಿರ್ದೇಶನಕ್ಕೆ ಮರಳಿರುವ ಸುನಿಲ್ ಕುಮಾರ್ ದೇಸಾಯಿ ಕೆಲವು ದಿನಗಳ ಹಿಂದೆಯಷ್ಟೇ ಸಿನೆಮಾದ ಆಡಿಯೋ ಬಿಡುಗಡೆ ಮಾಡಿ ಮುಗಿಸಿದ್ದಾರೆ. ಸಿನೆಮಾದ ಹೆಸರು 'ರೇ'. ಥ್ರಿಲ್ಲರ್ ಸಿನೆಮಾವಂತೆ.

ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ಮತ್ತೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸುವ ನಟ ರಮೇಶ್ "ನಾನು ಕೂಡ ಸಿನೆಮಾಗಳನು ಬರೆದು ನಿರ್ದೇಶಿಸಿದ್ದೇನೆ. ಸುನಿಲ್ ಅವರ ಸಿನೆಮಾ ಎಂದರೆ ಪಾತ್ರಗಳು ಮತ್ತು ಸಂಭಾಷಣೆಯ ಬಗ್ಗೆ ಹೆಚ್ಚು ಸ್ಪಷ್ಟತೆ ಇರುತ್ತದೆ. ಸಿನೆಮಾದ ಪ್ರತಿ ನಿಮಿಷದ ಬಗ್ಗೆ ಅವರಿಗೆ ಪರಿಕಲ್ಪನೆ ಇರುತ್ತದೆ. ಅವರ ನಿರ್ದೇಶನದಲ್ಲಿ ನಟಿಸಿದ 'ನಮ್ಮೂರ ಮಂದಾರ ಹೂವೆ' ಮತ್ತು 'ಪ್ರತ್ಯರ್ಥ' ನನ್ನ ವೃತ್ತಿಜೀವನದಲ್ಲಿ ಮೈಲುಗಲ್ಲುಗಳು" ಎನ್ನುತ್ತಾರೆ.

ಅವರೇ ಹೇಳುವಂತೆ 'ರೇ' ಶೀರ್ಷಿಕೆ ಹಾಸ್ಯಮಯವಾಗಿದೆಯಂತೆ. "ಇದು ಹಿಂದೆಂದೂ ಕಂಡರಿಯದ ಪ್ರೇಮಕಥೆ. ನಿಮಗೆ ಸಿನೆಮಾ ನೋಡಿಡಾಗ ಅರ್ಥವಾಗುತ್ತದೆ" ಎನ್ನುತ್ತಾರೆ ರಮೇಶ್.

ಸಿನೆಮಾದಲ್ಲಿ ಅನಂತ ನಾಗ್, ಹರ್ಷಿಕಾ ಪೂಣಚ್ಚ, ಸುಮನ್ ನಗರ್ಕರ್ ಮತ್ತು ಶರತ್ ಲೋಹಿತಾಶ್ವ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com