
ಬೆಂಗಳೂರು: ಸುದೀಪ್ ಮತ್ತು ನಿತ್ಯಾ ಮೆನನ್ ನಟನೆಯ, ತಾತ್ಕಾಲಿಕವಾಗಿ ಕೋಟಿಗೊಬ್ಬ-೨ ಎಂಬ ಶೀರ್ಷಿಕೆಯ ಸಿನೆಮಾದ ಹಿಂದಿ ಡಬ್ಬಿಂಗ್ ಹಕ್ಕುಗಳು ಹೈದರಾಬಾದ್ ಮೂಲದ ಆದಿತ್ಯ ಮ್ಯೂಸಿಕ್ ಸಂಸ್ಥೆ ದಾಖಲೆ ೧.೩ಕೋಟಿಗೆ ಮಾರಾಟವಾಗಿದೆ. ಇದು ಸ್ಯಾಂಡಲ್ವುಡ್ ನಲ್ಲಿ ದಾಖಲೆಯೇ ಎನ್ನಬೇಕು.
ಸೂರಪ್ಪ ಬಾಬು ನಿರ್ಮಾಣದ ಮತ್ತು ಕೆ ಎಸ್ ರವಿಕುಮಾರ್ ನಿರ್ದೇಶನದ ಈ ಚಿತ್ರ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಹಕ್ಕುಗಳ ಮಾರಾಟ ನಗದು ವ್ಯವಹಾರದಲ್ಲಿ ಮುಗಿದಿದೆ ಎನ್ನುತ್ತಾರೆ ಸೂರಪ್ಪ ಬಾಬು. "ಸುದೀಪ್, ಪ್ರಕಾಶ್ ರಾಜ್ ಮತ್ತು ಮುಖೇಶ್ ತಿವಾರಿ ಅಂತಹ ನಟರಿಂದ ಚಿತ್ರೀಕರಣದ ವೇಳೆಯಲ್ಲೇ ಈ ಸಿನೆಮಾ ಭಾರಿ ಆಸಕ್ತಿ ಹುಟ್ಟಿಸಿತ್ತು. ಈ ನಟರು ಹಿಂದಿ ಪ್ರೇಕ್ಷಕರಿಗೂ ಚಿರಪರಿಚಿತ. ಅಲ್ಲದೆ ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ್ ಈ ಸಿನೆಮಾ ನಿರ್ದೇಶಿಸುತ್ತಿರುವುದು ಕೂಡ ಕಾರಣ" ಎನ್ನುತ್ತಾರೆ ಸೂರಪ್ಪ.
ಈ ಸುದ್ದಿಯ ಜನಪ್ರಿಯತೆಯ ಹಿನ್ನಲೆಯಲ್ಲೇ ಡಿಸೆಂಬರ್ ಕೊನೆಗೆ ಚಿತ್ರೀಕರಣ ಮುಗಿಸಲು ಚಿತ್ರ ತಂಡ ನಿರ್ಧರಿಸಿದೆ. ಅಲ್ಲದೆ ಜನವರಿಯಲ್ಲಿ ಬಿಡುಗಡೆ ಮಾಡಲು ಕೂಡ ತಂಡ ಎದುರು ನೋಡುತ್ತಿದೆ. ಇದೇ ಮೊದಲ ಬಾರಿಗೆ ಸುದೀಪ್ ಮತ್ತು ನಿತ್ಯ ಮೆನನ್ ಒಟ್ಟಿಗೆ ನಟಿಸುತ್ತಿರುವುದು ಪ್ರೇಕ್ಷಕರಲ್ಲು ಕುತೂಹಲ ಏರಿಸಿದೆ.
ಈ ಸಿನೆಮಾ ತಮಿಳು ವಿತರಕರಲ್ಲೂ ಆಸಕ್ತಿ ಹುಟ್ಟಿಸಿದ್ದು ವಿತರಣೆಗೆ ಹಲವಾರು ಸಂಸ್ಥೆಗಳು ಮುಂದೆ ಬಂದಿವೆ ಎಂದು ತಿಳಿದುಬಂದಿದೆ.
Advertisement