ರಿಕ್ಕಿ ಟ್ರೇಲರ್ ಗೆ ಸಕಾರಾತ್ಮಕ ಪ್ರತಿಕ್ರಿಯೆ

ಪ್ರೇಕ್ಷಕನ ಕುತೂಹಲ ಕೆರಳಿಸಲು ಪರಿಣಾಮಕಾರಿ ಟ್ರೇಲರ್ ಅಗತ್ಯ ಎನ್ನುವ ನಟ ರಕ್ಷಿತ್ ಶೆಟ್ಟಿ, ಸುನಿ ನಿರ್ದೇಶನದ 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ಮತ್ತು ಅವರದ್ದೇ
ರಿಕ್ಕಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ
ರಿಕ್ಕಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ

ಬೆಂಗಳೂರು: ಪ್ರೇಕ್ಷಕನ ಕುತೂಹಲ ಕೆರಳಿಸಲು ಪರಿಣಾಮಕಾರಿ ಟ್ರೇಲರ್ ಅಗತ್ಯ ಎನ್ನುವ ನಟ ರಕ್ಷಿತ್ ಶೆಟ್ಟಿ, ಸುನಿ ನಿರ್ದೇಶನದ 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ಮತ್ತು ಅವರದ್ದೇ ಚೊಚ್ಚಲ ನಿರ್ದೇಶನದ 'ಉಳಿದವರು ಕಂಡಂತೆ' ಸಿನೆಮಾಗಳಿಗೆ ಟ್ರೇಲರ್ ಸಹಾಯ ಮಾಡಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.

ಎಸ ವಿ ಬಾಬು ನಿರ್ಮಿಸಿರುವ, ರಿಶಬ್ ಶೆಟ್ಟಿ ನಿರ್ದೇಶನದ 'ರಿಕ್ಕಿ' ಟ್ರೇಲರ್ ಗುರುವಾರ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ. ಯೂಟ್ಯೂಬ್ ನಲ್ಲಿ ಈ ಟ್ರೇಲರ್ ೧.೪ ಲಕ್ಷ ಬಾರಿ ವೀಕ್ಷಣೆಗೆ ಒಳಗಾಗಿದೆಯಂತೆ.

ನಿರ್ದೇಶಕ ಹೇಳುವ ಪ್ರಕಾರ ೧೦-೧೨ ಟ್ರೇಲರ್ ಅವತರಿಣಿಕೆಗಳನ್ನು ನಿರ್ಮಿಸಿ ಕೊನೆಗೆ ಈಗ ಬಿಡುಗಡೆಯಾಗಿರುವುದನ್ನು ಆಯ್ಕೆ ಮಾಡಿಕೊಂಡರಂತೆ. "ಸ್ಯಾಂಡಲ್ವುಡ್ ನಲ್ಲಿ ಟ್ರೇಲರ್ ಗಳಲ್ಲಿ ಸಾಮಾನ್ಯವಾಗಿ ಕಥೆ ಬಿಟ್ಟುಕೊಡುವುದಿಲ್ಲ. ಆದರೆ ಟ್ರೇಲನಲ್ಲಿ ಸಿನೆಮಾದ ಕಥೆಯನ್ನು ಸ್ಥೂಲವಾಗಿ ಹೇಳಬೇಕು ಎನ್ನುವುದು ನನ್ನ ನಂಬಿಕೆ" ಎನ್ನುತ್ತಾರೆ ರಕ್ಷಿತ್ ಶೆಟ್ಟಿ .

ಇದಕ್ಕೂ ಮುಂಚೆ ಇದು ಪ್ರೇಮ ಕಥೆ ಎಂದೇ ತಿಳಿಯಲಾಗಿದ್ದ ಸಿನೆಮಾದಲ್ಲಿ ನಕ್ಸಲ್ ಕೋನ ಕೂಡ ಸೇರಿಕೊಂಡಿದೆಯೆಲ್ಲ ಎಂದು ಕೇಳಿದರೆ "ಈ ಟ್ರೇಲರ್ ನಲ್ಲಿ ಕಥೆಯ ಎರಡು ಎಳೆಯನ್ನು ತೋರಿಸಿದ್ದೇವೆ, ಆದರೆ ಇನ್ನೊಂದು ಕುತೂಹಲಕಾರಿ ಎಳೆಯಿದೆ" ಎನ್ನುತ್ತಾರೆ ರಕ್ಷಿತ್.

ಟ್ರೇಲರ್ ಅನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರೆ, ಟ್ರೇಲರ್ ನಲ್ಲಿ ಸುದೀಪ್ ಅವರ ಕಂಠ ಕೂಡ ಇದೆ. ಸಿನೆಮಾದ ಬಿಡುಗಡೆ ದಿನಾಂಕ ಇನ್ನೂ ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com