
ಮುಂಬಯಿ: ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದ ಹಾಲಿವುಡ್ ಆಕ್ಷನ್ ಚಿತ್ರಗಳ ಹೀರೋ ಸಿಲ್ವೆಸ್ಟರ್ ಸ್ಟಾಲೋನ್ ಅವರ ಪುತ್ರನಿಗೆ ಹರಿದ್ವಾರದಲ್ಲಿ ಶ್ರಾದ್ಧ ಕಾರ್ಯಕ್ರಮ ನೆರವೇರಿಸಿದ್ದಾರೆ.
ಸಿಲ್ವೆಸ್ಟರ್ ಸ್ಟಾಲೋನ್ ಅವರ 36ರ ವರ್ಷದ ಮಗ ಸೇಜ್ ಪ್ರೇತಾತ್ಮಕ್ಕೆ ಚಿರ ಶಾಂತಿ ದೊರಕಿಸುವ ಸಲುವಾಗಿ ಇತ್ತೀಚೆಗೆ ಹಿಂದೂ ಧರ್ಮದ ಆಚರಣೆಯ ಪ್ರಕಾರ ಹರಿದ್ವಾರದಲ್ಲಿ ಶ್ರಾದ್ಧ ಕಾರ್ಯವನ್ನು ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ರನ ಶ್ರಾದ್ಧ ಕರ್ಮಗಳನ್ನು ವಿಧ್ಯುಕ್ತವಾಗಿ ನೆರವೇರಿಸುವುದಕ್ಕಾಗಿ ಸಿಲ್ವೆಸ್ಟರ ಸ್ಟಾಲೋನ್ ಅವರು ತನ್ನ ಸೋದರ ಸಂಬಂಧಿ ಮೈಕೆಲ್ ಹಾಗೂ ಆತನ ಪತ್ನಿಯನ್ನು ಹರಿದ್ವಾರದ ಕಂಖಾಲ್ ಎಂಬಲ್ಲಿಗೆ ಕಳುಹಿಸಿಕೊಟ್ಟಿದ್ದರು.
ಪ್ರತೀಕ್ ಮಿಶ್ರಾಪುರಿ ಎಂಬ ಜ್ಯೋತಿಷಿಯ ಸಲಹೆಯ ಮೇರೆಗೆ ಸಿಲ್ವೆಸ್ಟರ್ ಸ್ಟಾಲೋನ್ ಅವರು ತನ್ನ ಅಗಲಿದ ಪುತ್ರನ ಆತ್ಮಕ್ಕೆ ಚಿರಶಾಂತಿಯನ್ನು ದೊರಕಿಸಲು ಶ್ರಾದ್ಧ ಕಾರ್ಯಾದಿ ಪೂಜಾ ಕಾರ್ಯಕ್ರಮಗಳನ್ನು ಹರಿದ್ವಾರದಲ್ಲಿ ನಡೆಸಲು ನಿರ್ಧರಿಸಿದ್ದರು. ಮೂರು ವರ್ಷಗಳ ಹಿಂದೆ ಸ್ಟಾಲೋನ್ ಅವರ ಪುತ್ರ ಸೇಜ್, ಲಾಸ್ ಏಂಜಲಿಸ್‌ನ ಅಪಾರ್ಟ್‌ಮೆಂಟ್ ಒಂದರಲ್ಲಿ ಮೃತಪಟ್ಟಿದ್ದು ಪತ್ತೆಯಾಗಿತ್ತು.
Advertisement