ಐಂದ್ರಿತಾ ರೇ ಈಗ ಜಡ್ಜ್!

ಜಡ್ಜ್‍ಗಳ ಸಂಖ್ಯೆ ಜಾಸ್ತಿ ಆಗ್ತಿದೆ! ಪ್ರಿಯಾಮಣಿ, ರಕ್ಷಿತಾ ಬಳಿಕ ಈಗಿನ ಸೇರ್ಪಡೆ ಐಂದ್ರಿತಾ ರೇ...
ಐಂದ್ರಿತಾ ರೇ
ಐಂದ್ರಿತಾ ರೇ
ಜಡ್ಜ್‍ಗಳ ಸಂಖ್ಯೆ ಜಾಸ್ತಿ ಆಗ್ತಿದೆ! ಪ್ರಿಯಾಮಣಿ, ರಕ್ಷಿತಾ ಬಳಿಕ ಈಗಿನ ಸೇರ್ಪಡೆ ಐಂದ್ರಿತಾ ರೇ. ಚಿತ್ರನಟಿಯರಿಗೆ ಸಿನಿಮಾದಲ್ಲಿ ಆಫರ್ ಕಡಿಮೆ ಆದಾಗ ಮುಖ ಮಾಡುವುದು ಕಿರುತೆರೆಯತ್ತ. 
ಐಂದ್ರಿತಾ ರೇ ಮಟ್ಟಿಗೆ ಈ ಮಾತು ನಿಜವೇ ಇದ್ದಿರಬಹುದು. ಸುವರ್ಣ ಚಾನೆಲ್‍ನಲ್ಲಿ ಮೂಡಿಬರಲಿರುವ `ಸೈ ಟು ಡ್ಯಾನ್ಸ್' ಶೋಗೆ ಐಂದ್ರಿತಾ ರೇ ಜಡ್ಜ್ ಆಗಲಿದ್ದಾಳಂತೆ. ಜಗ್ಗೇಶ್ ಕೂಡ ಜಡ್ಜ್ ಆಗಿ ಪಕ್ಕದಲ್ಲಿರುತ್ತಾರೆಂದು ಸುದ್ದಿ ಆಗಿದೆ. 
ಈ ಶೋ ಪ್ರತಿ ಶನಿವಾರ ರಾತ್ರಿ 8ಕ್ಕೆ ಪ್ರಸಾರವಾಗಲಿದ್ದು, ಮೊದಲ ಎಪಿಸೋಡ್‍ಗೆ ಗೆಸ್ಟ್ ಜಡ್ಜ್ ಆಗಿ ಶರ್ಮಿಳಾ ಮಾಂಡ್ರೆ ಕಾಣಿಸಿಕೊಳ್ತಿದ್ದಾಳೆ. ಅಂದಹಾಗೆ, ಈ ಶೋ ಇರುವುದು ಅಮ್ಮಂದಿರಿಗಂತೆ. ಡ್ಯಾನ್ಸ್, ಗೇಮ್ಸ್ ನಂತಹ ಬೇರೆ ಬೇರೆ ಟಾಸ್ಕ್‍ಗಳು ಇಲ್ಲಿದ್ದು ಒಟ್ಟು 10 ಸ್ಪರ್ಧಿಗಳು ಪಾಲ್ಗೊಳ್ಳುತ್ತಾರೆ. ಪ್ರತಿವಾರ ಎಲಿಮಿನೇಶನ್ ಇರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com