
ರಂಗಿತರಂಗ ಸಿನಿಮಾದ ಯಶಸ್ಸಿನ ಖ್ಯಾತಿಯಲ್ಲಿರುವ ನಟ ನಿರೂಪ್ ಭಂಡಾರಿ ಮತ್ತೊಂದು ಸಂತೋಷದ ಸುದ್ದಿ ನೀಡಿದ್ದಾರೆ. ಅವರು ತಮ್ಮ ಸ್ನೇಹಿತೆ ಧನ್ಯ ಅವರನ್ನು ವಿವಾಹವಾಗಲಿದ್ದಾರೆ.ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ನಿನ್ನೆಯಷ್ಟೇ ಮೈಸೂರಿನಲ್ಲಿ ಆಪ್ತರ ಸಮ್ಮುಖದಲ್ಲಿ ನೆರವೇರಿತು.
'' ಧನ್ಯ ಅವರು ಕೂಡ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ರಜೆಯಲ್ಲಿ ಇಲ್ಲಿಗೆ ಬಂದಿದ್ದಾಗ ನಮ್ಮ ಕುಟುಂಬದವರ ಮತ್ತು ಸ್ನೇಹಿತರ ಮುಂದೆ ವಿವಾಹ ಪ್ರಸ್ತಾಪ ಇಟ್ಟೆವು. ಎರಡೂ ಕುಟುಂಬದವರು ಒಪ್ಪಿಕೊಂಡ ನಂತರ ಅಮೆರಿಕಕ್ಕೆ ಹೋಗುವ ಮೊದಲೇ ನಿಶ್ಚಿತಾರ್ಥ ನೆರವೇರಿಸಲಾಯಿತು'' ಎಂದು ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ನಿರೂಪ್ ತಿಳಿಸಿದ್ದಾರೆ.
ಇನ್ನು ಒಂದು ವರ್ಷದೊಳಗೆ ಮದುವೆ ಮಾಡಿಕೊಳ್ಳುವ ಆಲೋಚನೆಯನ್ನು ಈ ಜೋಡಿ ಹೊಂದಿದೆ.
Advertisement