
ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಟೀಕೆಗಳಿಗೊಳಗಾಗುವುದು ಹೊಸದೇನಲ್ಲ. ಈ ಹಿಂದೆಯೂ ನಟ ಸಲ್ಮಾನ್ ಖಾನ್ ಮುಂಬೈ ಸರಣಿ ಸ್ಪೋಟದ ಆರೋಪಿ ಯಾಕುಬ್ ಮೆಮನ್ ಪರವಾಗಿ ಟ್ವೀಟ್ ಮಾಡಿ ಹಲವು ವಿವಾದಗಳಿಗೆ ಸಿಲುಕಿದ್ದರೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಹ ಮೊದಲ ಬಾರಿಗೆ ರಾಜಕೀಯ ಪ್ರೇರಿತ ವಿಷಯವೊಂದರ ಬಗ್ಗೆ ಟೀಕೆ ಮಾಡಿ ಟ್ವಿಟರ್ ನಲ್ಲಿ ಹಲವು ಟೀಕೆಗಳಿಗೊಳಗಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ನಾಲ್ಕು ದಿನಗಳ ಕಾಲ ಮಾಂಸ ಮಾರಾಟ ನಿಷೇಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರು ಸೋನಾಕ್ಷಿ ಸಿನ್ಹಾ ಅವರು ನಿನ್ನೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಮ್ಮದು ಸ್ವತಂತ್ರ ದೇಶ! ಬ್ಯಾನ್-ಇಸ್ತಾನ್ ಗೆ ಸ್ವಾಗತ....ಇದರ ಅರ್ಥ ಭಾರತ...ಎಂದು ಹೇಳಿದ್ದರು.
Advertisement