ಬರಲಿದೆ ಗ್ಯಾಂಗ್ಸ್ ಆಫ್ ವಸೀಪುರ್-೩

ಅನುರಾಗ್ ಕಶ್ಯಪ್ ನಿರ್ದೇಶನದ 'ಗ್ಯಾಂಗ್ಸ್ ಆಫ್ ವಸೀಪುರ್' ಭಾಗ ೧ ಮತ್ತು ೨ರಲ್ಲಿ ಪ್ರೇಕ್ಷಕರನ್ನು ತಲ್ಲಣಗೊಳಿಸಿ ರಂಜಿಸಿದ ಮೇಲೆ ಈಗ ಮೂರನೆ ಅವತರಿಣಿಕೆ ಸಿದ್ಧವಾಗುತ್ತಿದೆಯಂತೆ.
'ಗ್ಯಾಂಗ್ಸ್ ಆಫ್ ವಸೀಪುರ್' ಭಾಗ ೨ರ ಸ್ಟಿಲ್
'ಗ್ಯಾಂಗ್ಸ್ ಆಫ್ ವಸೀಪುರ್' ಭಾಗ ೨ರ ಸ್ಟಿಲ್
Updated on: 

ಕರಾಚಿ: ಅನುರಾಗ್ ಕಶ್ಯಪ್ ನಿರ್ದೇಶನದ 'ಗ್ಯಾಂಗ್ಸ್ ಆಫ್ ವಸೀಪುರ್' ಭಾಗ ೧ ಮತ್ತು ೨ರಲ್ಲಿ ಪ್ರೇಕ್ಷಕರನ್ನು ತಲ್ಲಣಗೊಳಿಸಿ ರಂಜಿಸಿದ ಮೇಲೆ ಈಗ ಮೂರನೆ ಅವತರಿಣಿಕೆ ಸಿದ್ಧವಾಗುತ್ತಿದೆಯಂತೆ. ಆದರೆ ಈ ಬಾರಿ ಅವರು ನಿರ್ದೇಶಕರಾಗಿರುವುದಿಲ್ಲವಂತೆ ಎನ್ನುತ್ತವೆ ಮೂಲಗಳು.

ಮೂಲಗಳ ಪ್ರಕಾರ ೪೨ ವರ್ಷದ ನಿರ್ದೇಶಕ, ಹಿಂದಿನ ಎರಡು ಸಿನೆಮಾಗಳಿಗೆ ಕಥೆ-ಸ್ಕ್ರಿಪ್ಟ್ ಬರೆದ ಜೇಶನ್ ಕ್ವಾದ್ರಿ ಅವರಿಗೆ ಸಿನೆಮಾ ನಿರ್ದೇಶಿಸಲು ಹೇಳಿದ್ದಾರೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

ಸಂಗೀತ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಈ ವಿಷಯ ತಿಳಿಸಿರುವ ಬರಹಗಾರ ಕ್ವಾದ್ರಿ "ವಸೀಪುರ್ ೩ ಕ್ಕೆ ಚಿತ್ರಕತೆ ಬರೆಯಲು ಅನುರಾಗ್ ನನ್ನ ಹಿಂದೆ ಬಿದ್ದಿದ್ದಾರೆ. ಅದನ್ನು ನಿರ್ದೇಶಿಸಲು ಕೂಡ ಹೇಳಿದ್ದಾರೆ. ಆದುದರಿಂದ ವಸೀಪುರ್ ೩ ಕ್ಕೆ ಚಿತ್ರಕಥೆ ಬರೆಯಲು ಪ್ರಾರಂಭಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

ಕ್ವಾದ್ರಿ ವಸೀಪುರ್ ಎರಡನೆ ಭಾಗದಲ್ಲಿ ನಟಿಸಿದ್ದಾರೆ ಕೂಡ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com