ಕೆಂಡಸಂಪಿಗೆ ಮೆಚ್ಚಿದ ಯಶ್, ಅಪ್ಪು

ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಇದೀಗ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್...
ಯಶ್, ಪುನೀತ್ ರಾಜ್ ಕುಮಾರ್
ಯಶ್, ಪುನೀತ್ ರಾಜ್ ಕುಮಾರ್
Updated on
ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಇದೀಗ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ವೀಕ್ಷಿಸಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಯಶ್ ಚಿತ್ರತಂಡದೊಂದಿಗೆ ಕೆಂಡಸಂಪಿಗೆಯನ್ನು ವೀಕ್ಷಿಸಿದ್ದು ಚಿತ್ರಕ್ಕೆ ಬಹುಪರಾಕ್ ಅಂದಿದ್ದಾರೆ. ನಿರ್ದೇಶಕ ಸೂರಿ ಹಾಗೂ ಕ್ಯಾಮೆರಾಮ್ಯಾನ್ ಸತ್ಯ ಹೆಗ್ಡೆಯ ಈ ಹೊಸ ಪ್ರಯತ್ನಕ್ಕೆ ರಾಕಿಂಗ್ ಸ್ಟಾರ್ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ವಿಶೇಷ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಕೆಂಡಸಂಪಿಗೆಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಎಲ್ಲರೂ ಚಿತ್ರವನ್ನು ನೋಡಿ ಹಾಗೆಯೇ ಕೆಂಡಸಂಪಿಗೆ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಚಿತ್ರದಲ್ಲಿ ಹೊಸ ಮುಖಗಳಾದ ವಿಕ್ಕಿ ಹಾಗೂ ಮಾನ್ವಿತಾ ನಾಯಕ-ನಾಯಕಿಯಾಗಿ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com