ಪ್ರಜ್ವಲ್ ದೇವರಾಜ್
ಸಿನಿಮಾ ಸುದ್ದಿ
ಪ್ರಜ್ವಲ್ ದೇವರಾಜ್ ಗೆ ಕಂಕಣ ಭಾಗ್ಯ
ಕನ್ನಡ ಸಿನಿಮಾ ಇಂಡಸ್ಟ್ರಿಯ ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್, ತಮ್ಮ ದೀರ್ಘಕಾಲದ ಗೆಳತಿ ...
ಕನ್ನಡ ಸಿನಿಮಾ ಇಂಡಸ್ಟ್ರಿಯ ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್, ತಮ್ಮ ದೀರ್ಘಕಾಲದ ಗೆಳತಿ ರಾಗಿಣಿ ಚಂದ್ರನ್ ಎಂಬಾಕೆಯನ್ನು ಮುಂದಿನ ತಿಂಗಳು ಮದುವೆಯಾಗುತ್ತಿದ್ದಾರೆ.
ಬೆಂಗಳೂರು ಮೂಲದ ನೃತ್ಯಗಾರ್ತಿ ಹಾಗೂ ಮಾಡೆಲ್ ಆಗಿರುವ ರಾಗಿಣಿ ಈಗಾಗಲೇ ಅನೇಕ ವಿಡಿಯೋ ಮತ್ತು ಪತ್ರಿಕೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಮದುವೆ ಅಕ್ಟೋಬರ್ 20ರಿಂದ 25ರ ಮಧ್ಯದ ಯಾವುದಾದರೊಂದು ದಿನ ನಡೆಯಲಿದೆ ಎಂದು ಇವರ ಆಪ್ತ ಮೂಲಗಳು ತಿಳಿಸಿವೆ.
ಕನ್ನಡ ಸಿನಿಮಾರಂಗದಲ್ಲಿ ಕಳೆದ ಎಂಟು ವರ್ಷಗಳಿಂದಿರುವ ಪ್ರಜ್ವಲ್ ದೇವರಾಜ್ ಇದುವರೆಗೆ 22 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ತಮ್ಮ ತಂದೆಯ ಜತೆ ನಟಿಸಿರುವ ಅರ್ಜುನ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದಲ್ಲದೆ ಇನ್ನೊಂದು ಚಿತ್ರ ಕೂಡ ತೆರೆಗೆ ಬರಲು ಸಿದ್ಧವಾಗಿದೆ.
ಈ ಹೊತ್ತಿನಲ್ಲಿ ಮದುವೆಯ ಬಾಂಧವ್ಯಕ್ಕೆ ಅಡಿ ಇಡುತ್ತಿರುವ ಪ್ರಜ್ವಲ್ ದೇವರಾಜ್ ಜೋಡಿಗೆ ಅಭಿನಂದನೆಗಳು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ