ತಮಿಳು ಚಿತ್ರರಂಗಕ್ಕೆ ನಾಗಾರ್ಜುನ ಪುತ್ರನನ್ನು ಪರಿಚಯಿಸಲಿರುವ ರಜನಿಕಾಂತ್

ತಮಿಳು ಚಿತ್ರೋದ್ಯಮದ ಮೂಲಗಳನ್ನು ನಂಬುವುದಾದರೆ, ಸೂಪರ್ ಸ್ಟಾರ್ ರಜನಿಕಾಂತ್ ಅವರು ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಅವರನ್ನು
ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್
ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್
Updated on

ಚೆನ್ನೈ: ತಮಿಳು ಚಿತ್ರೋದ್ಯಮದ ಮೂಲಗಳನ್ನು ನಂಬುವುದಾದರೆ, ಸೂಪರ್ ಸ್ಟಾರ್ ರಜನಿಕಾಂತ್ ಅವರು ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ಅಖಿಲ್ ಅವರನ್ನು ಮುಂದಿನ ತಿಂಗಳ ಮೊದಲ ಭಾಗದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ತಮಿಳು ಚಿತ್ರರಂಗಕ್ಕೆ ಪರಿಚಯಿಸಲಿದ್ದಾರಂತೆ.

ಅಖಿಲ್ ನಟನೆಯ ಚೊಚ್ಚಲ ಚಿತ್ರ ಅವರದ್ದೇ ಹೆಸರಿನ 'ಅಖಿಲ್'  ತೆಲುಗಿನಲ್ಲಿ ನಿರ್ಮಾಣವಾಗಿದ್ದು ತಮಿಳಿನಲ್ಲಿ ಕೂಡ ಡಬ್ ಆಗುತ್ತಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಸಿನೆಮಾ ತೆರೆ ಕಾಣಲಿದೆ.

"ನಿರ್ಮಾಪಕ ಸಿ ಕಲ್ಯಾಣ್ ಅವರು ತಮಿಳು ಅವತರಿಣೆಕೆಯ ಹಕ್ಕುಗಳನ್ನು ಖರೀದಿಸಿದ್ದಾರೆ. ಅವರು ಅಖಿಲ್ ನನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಲು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಇದಕ್ಕೆ ರಜನೀಕಾಂತ್ ಅವರು ಕೂಡ ಹಾಜರಿದ್ದು ಆಶೀರ್ವದಿಸಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ತಮಿಳು ಚಿತ್ರ 'ಕಬಾಲಿ'ಯ ಚಿತ್ರೀಕರಣದಲ್ಲಿರುವ ರಜನೀಕಾಂತ್ ಈ ಕಾರ್ಯಕ್ರಮದ ಹಾಜರಾತಿಗೆ ಇನ್ನೂ ಒಪ್ಪಿಗೆ ಸೂಚಿಸಬೇಕಿದೆ ಎಂದು ಕೂಡ ಮೂಲಗಳು ತಿಳಿಸಿವೆ.

ವಿವಿ ವಿನಾಯಕ್ ನಿರ್ದೇಶನದ 'ಅಖಿಲ್' ನಲ್ಲಿ ಸಾಯ್ಯೇಷಾ ಕೂಡ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com