ಡಾ. ರಾಜ್ 10ನೇ ಪುಣ್ಯ ತಿಥಿ; ಕುಟುಂಬ, ಅಭಿಮಾನಿಗಳ ಸ್ಮರಣೆ

ಕನ್ನಡ ಚಿತ್ರರಂಗದ ಮೇರು ನಟ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ 10 ವರ್ಷಗಳೇ ಕಳೆದಿವೆ. ಆದರೂ ಅಭಿಮಾನಿಗಳಲ್ಲಿ ಅವರ...
ರಾಜ್ ಕುಮಾರ್ ಸಮಾಧಿ
ರಾಜ್ ಕುಮಾರ್ ಸಮಾಧಿ
Updated on

ಕನ್ನಡ ಚಿತ್ರರಂಗದ ಮೇರು ನಟ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ 10 ವರ್ಷಗಳೇ ಕಳೆದಿವೆ. ಆದರೂ ಅಭಿಮಾನಿಗಳಲ್ಲಿ ಅವರ ಮೇಲಿನ ಅಭಿಮಾನ, ಪ್ರೀತಿ, ಗೌರವಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ರಾಜಣ್ಣರ ಹತ್ತನೇ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್ ಸ್ಮಾರಕಕ್ಕೆ ರಾಜ್ ಸಹೋದರಿ ನಾಗಮ್ಮ, ಪಾರ್ವತಮ್ಮ ರಾಜ್ ಕುಮಾರ್, ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರೂ ರಾಜ್ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿದ್ದರು.ಇನ್ನು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಆಗಮಿಸಿ ದರ್ಶನ ಪಡೆದರು.

ಇದೇ ಅಲ್ಲದೆ ಚಲನಚಿತ್ರ ವಾಣಿಜ್ಯ ಮ೦ಡಳಿ ಅಧ್ಯಕ್ಷ ಸಾ.ರಾ. ಗೋವಿ೦ದು, ನಿದೇ೯ಶಕ ಬರಗೂರು ರಾಮಚ೦ದ್ರಪ್ಪ, ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ನಿದೇ೯ಶಕಿ ವಿಜಯಲಕ್ಷ್ಮಿ ಸಿ೦ಗ್, ಶಾಸಕ ಗೋಪಾಲಯ್ಯ ಸೇರಿದ೦ತೆ ಕನ್ನಡ ಚಿತ್ರರ೦ಗದ ಗಣ್ಯರು ಡಾ. ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.

ಇನ್ನು ಕಂಠೀರವ ಸ್ಟುಡಿಯೋಗೆ ಆಗಮಿಸಿದ ಅಭಿಮಾನಿಗಳಿಗಾಗಿ ರಾಜ್ ಕುಟುಂಬ ಊಟದ ವ್ಯವಸ್ಥೆಯನ್ನು ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com