
ಮುಂಬಯಿ: ಸೆನ್ಸೇಷನಲ್ ಕಮ್ ಕಾಂಟ್ರವರ್ಶಿಯಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಬರುತ್ತಿರುವ ಭೂಗತ ಲೋಕದ ದೊರೆ ಮುತ್ತಪ್ಪ ರೈ ಜೀವನ ಚರಿತ್ರೆ ಆಧರಿಸಿರುವ 'ರೈ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬದಲು ಕರ್ನಾಟಕದ ಅಳಿಯ ವಿವೇಕ್ ಓಬೇರಾಯ್ ಅಭಿನಯಿಸುತ್ತಿದ್ದಾರೆ.
ರೈ ಪಾತ್ರಕ್ಕೆ ಆರ್‌ಜಿವಿ ಬಾಲಿವುಡ್ ನಟ, ಕರ್ನಾಟಕದ ಅಳಿಯ ವಿವೇಕ್ ಓಬೇರಾಯ್ ಅವರನ್ನು ಆಯ್ಕೆ ಮಾಡಿದ್ದಾರೆ. ಮುತ್ತಪ್ಪ ರೈ ಜೀವನ ಕುರಿತು ಚಿತ್ರ ರೂಪಿಸುತ್ತಿರುವ ವರ್ಮಾ ಆ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಈ ಚಿತ್ರವನ್ನು ನಿರ್ದೇಶಿಸುವುದಾಗಿ ವರ್ಮ ತಿಳಿಸಿದ್ದಾರೆ.
ಮೊದಲಿಗೆ ರೈ ಪಾತ್ರಕ್ಕೆ ಸುದೀಪ್ ಅವರನ್ನು ಆಯ್ಕೆ ಮಾಡಲು ಯೋಚಿಸಿದ್ದೆ. ಆದರೆ ಕೆಲ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಈಗ ವಿವೇಕ್ ಓಬೇರಾಯ್ ಅವರನ್ನು ಆಯ್ಕೆ ಮಾಡಿದ್ದೇನೆ. ಬೆಂಗಳೂರು, ಮಂಗಳೂರು, ಮುಂಬೈ, ದುಬೈ, ಲಂಡನ್‌ಗಳಲ್ಲಿ ಚಿತ್ರದ ಶೂಟಿಂಗ್ ಮಾಡುವುದಾಗಿ ವರ್ಮಾ ಹೇಳಿಕೊಂಡಿದ್ದಾರೆ.
ಮುತ್ತಪ್ಪ ರೈ ಜನ್ಮದಿನವಾದ ಮೇ 1 ರಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಮುತ್ತಪ್ಪ ರೈ ಅವರೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ ಅಂತಾ ಕೂಡಾ ಆರ್‌ಜಿವಿ ಟ್ವೀಟ್ ಮಾಡಿದ್ದಾರೆ. ಸಿ ಆರ್ ಮನೋಹರ್ ಚಿತ್ರವನ್ನು ನಿರ್ಮಿಸಲಿದ್ದಾರೆ ಎಂದು ವರ್ಮ ಮಾಹಿತಿ ನೀಡಿದ್ದಾರೆ.
Advertisement