
ಮುಂಬೈ: ಕಿರುತೆರೆ ನಟಿ ಪ್ರತ್ಯೂಷ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿರುವ ನಟ ರಾಹುಲ್ ರಾಜ್ ಸಿಂಗ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಏ.25ಕ್ಕೆ ಮುಂದೂಡಲಾಗಿದೆ.
ನಟಿ ಪ್ರತ್ಯೂಷ ಅವರು ಏ.1 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರತ್ಯೂಷ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಇದರಂತೆ ಹಲವರು ರಾಹುಲ್ ಕುರಿತು ಆರೋಪಗಳನ್ನು ವ್ಯಕ್ತಪಡಿಸಿದ್ದರು. ಇದರಂತೆ ರಾಹುಲ್ ನನ್ನು ಮುಂಬೈ ಪೊಲೀಸರು ರಾಹುಲ್ ನನ್ನು ಏ.3 ರಂದು ಬಂಧನಕ್ಕೊಳಪಡಿಸಿದ್ದರು.
ನಂತರ ರಾಹುಲ್ ನಿರೀಕ್ಷಣಾ ಜಾಮೀನು ಕೋರಿ ಮುಂಬೈ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ರಾಹುಲ್ ಹೈ ಕೋರ್ಟ್ ಮೆಟ್ಟಿಲೇರಿದ್ದರು.
ನಂತರ ಹೈಕೋರ್ಟ್ ಏ.18ರವರೆಗೆ ರಾಹುಲ್ ಗೆ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಮತ್ತೆ ರಾಹುಲ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಏ.25ಕ್ಕೆ ಮುಂದೂಡಿದ್ದು, ಏ.23ರೊಳಗಾಗಿ ಬಂಗುರ್ ನಗರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
Advertisement