
ಮುಂಬೈ: ನಕಲಿ ಇಮೇಲ್ ಐಡಿ ಪ್ರಕರಣದಲ್ಲಿ ನಟಿ ಕಂಗನಾ ಹಾಗೂ ಹೃತಿಕ್ ರೋಷನ್ ಮಧ್ಯೆ ಕಾನೂನಾತ್ಮಕ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಕಂಗನಾ ಅಧಿಕೃತವಾಗಿ ಹೇಳಿಕೆಯನ್ನು ದಾಖಲಿಸುತ್ತಿಲ್ಲವೇಕೆ ಎಂದು ಹೃತಿಕ್ ಪರ ವಕೀಲ ಕಂಗನಾಗೆ ಪ್ರಶ್ನೆ ಹಾಕಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಹೃತಿಕ್ ಪರ ವಕೀಲ, ಕಂಗನಾ ಅವರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಆದರೆ, ಅಧಿಕೃತವಾಗಿ ಹೇಳಿಕೆಯನ್ನು ದಾಖಲಿಸುತ್ತಿಲ್ಲ. ಒಂದು ವೇಳೆ ಅಧಿಕೃತವಾಗಿ ಹೇಳಿಕೆ ನೀಡಿದರೆ, ಸೈಬರ್ ಕ್ರೈಂ ಪೊಲೀಸರಿಗೆ ಇದು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಕಂಗನಾ ಅವರು ಮಾಧ್ಯಮಗಳ ಮೂಲಕ ಹೋರಾಟ ನಡೆಸಲು ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ, ಕಂಗನಾ ಅಧಿಕೃತವಾಗಿ ಹೇಳಿಕೆ ನೀಡದಿರುವ ಕಾರಣ ತನಿಖೆ ಮುಂದೆ ಸಾಗುತ್ತಿಲ್ಲ. ಹೃತಿಕ್ ರೋಷನ್ ಈಗಾಗಲೇ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಇನ್ನು ಸೈಬರ್ ಕ್ರೈಂ ಪೊಲೀಸರು ಕಂಗನಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಯತ್ನ ನಡೆಸುತ್ತಿದ್ದು, ಕಂಗನಾ ಅವರು ಹೇಳಿಕೆ ನೀಡಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.
ಇನ್ನು ಕೆಲವು ಮಾಧ್ಯಮಗಳು ನನಗೆ ಕೆಲವು ಗಂಟೆಗಳಿಂದಲೂ ಕರೆ ಮಾಡುತ್ತಿದ್ದಾರೆ. ಕಂಗನಾ ಅವರನ್ನು ಭೇಟಿಯಾಗಲು ಪೊಲೀಸರು ತೆರಳುತ್ತಿದ್ದಾರೆಂದು ಹೃತಿಕ್ ಅವರ ಪಿಆರ್ ಒಗಳು ಮಾಹಿತಿ ನೀಡಿದ್ದಾರೆಂದು ಹೇಳುತ್ತಿದ್ದಾರೆ. ಈ ಮಾಹಿತಿಯೆಲ್ಲಾ ಸುಳ್ಳಿ. ಕಂಗನಾ ಅವರನ್ನು ಭೇಟಿಯಾಗಲು ಯಾರೂ ಹೋಗುತ್ತಿಲ್ಲ.
ನನ್ನ ಕಕ್ಷಿದಾರರೇನು ಹೇಡಿಯಲ್ಲ ಕಾಣೆಯಾಗುವುದಕ್ಕೆ. ಕಾನೂನಾತ್ಮಕವಾಗಿ ಹೋರಾಡಲು ನಾವು ಸಿದ್ಧಿರಿದ್ದೇವೆ. ನಮಗೆ ಯಾವುದೇ ಭಯವಿಲ್ಲ. ಕೆಲವು ಸ್ಪಷ್ಟ ಕಾರಣಗಳಿಂದ ಹೃತಿಕ್ ಅವರ ಪಿಆರ್ ಒಗಳು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆಂದು ಹೇಳಿದ್ದಾರೆ.
ಇತ್ತೀಚೆಗೆ, ಹೃತಿಕ್ ಮತ್ತು ಕಂಗನಾ ಪರಸ್ಪರರಿಗೆ ಲೀಗಲ್ ನೋಟಿಸ್ ಜಾರಿ ಮಾಡಿಕೊಂಡಾಗ, ಹೃತಿಕ್ ಅವರೊಂದಿಗೆ ತಾವು ಇಮೇಲ್ ಮೂಲಕ ಸಂಪರ್ಕ ಇರಿಸಿಕೊಂಡಿರುವುದಾಗಿ ಕಂಗನಾ ತಿಳಿಸಿದ್ದರು. ಆದರೆ ಇದನ್ನು ತಳ್ಳಿಹಾಕಿದ್ದ ಹೃತಿಕ್, ಸಂಬಂಧಪಟ್ಟ ಇಮೇಲ್ ಐಡಿಯನ್ನು ತಾನು ಸೃಷ್ಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.
Advertisement