
ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ವಿವಾದಗಳು ಸಾಮಾನ್ಯ. ಅದೇ ರೀತಿ ಇದೀಗ ಯೋಗರಾಜ್ ಭಟ್ಟರ ಬಹುನಿರೀಕ್ಷಿತ ದನ ಕಾಯೋನು ಚಿತ್ರದ ಟೈಟಲ್ ಕುರಿತಂತೆ ಸಲೀಂವುಲ್ಲಾ ಖಾನ್ ಎಂಬುವರು ನಿರ್ಮಾಪಕ ಆರ್. ಶ್ರೀನಿವಾಸ್ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ದನ ಕಾಯೋನು ಚಿತ್ರದ ಶೀರ್ಷಿಕೆ ವಿಚಾರವಾಗಿ ಸಲೀಂವುಲ್ಲಾ ದೂರು ದಾಖಲಿಸಿದ್ದು, ಕಳೆದ ಎರಡು ವರ್ಷಗಳ ಹಿಂದೆ ದನ ಕಾಯೋನು ಚಿತ್ರದ ಶೀರ್ಷಿಕೆಯನ್ನು ನಾನು ನೋಂದಣಿ ಮಾಡಿಸಿದ್ದೇ, ಆದರೆ ದನ ಕಾಯೋನು ಚಿತ್ರದ ನಿರ್ಮಾಪಕ ಶ್ರೀನಿವಾಸ್ ಚಿತ್ರದ ಟೈಟಲ್ ನೋಂದಣಿ ಮಾಡಸದೆ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ ಎಂದು ಸಲೀಂವುಲ್ಲಾ ಖಾನ್ ಆರೋಪಿಸಿದ್ದಾರೆ.
ಟೈಟಲ್ ಕುರಿತಂತೆ ವಾಣಿಜ್ಯ ಮಂಡಳಿಗೆ ಎರಡು ಸಲ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇ. ಈ ಸಂಬಂಧ ನಿರ್ಮಾಪಕ ಆರ್ ಶ್ರೀನಿವಾಸ್ ಗೆ ಛೇಂಬರ್ ನೋಟಿಸ್ ನೀಡಿತ್ತು. ಆದರೆ ಇದೀಗ ಚಿತ್ರದ ಟೈಟಲ್ ಬಿಟ್ಟುಕೊಡುವಂತೆ ನಿರ್ಮಾಪಕ ಆರ್. ಶ್ರೀನಿವಾಸ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ಟರು ಬೆದರಿಕೆ ಹಾಕಿದ್ದಾರೆ ಎಂದು ಸಲೀಂವುಲ್ಲಾ ಛೇಂಬರ್ ಗೆ ದೂರು ನೀಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ನಾನು ಹೊಸಬ ಆದರೆ ಯೋಗರಾಜ್ ಭಟ್ಟರು ಹಾಗೂ ಆರ್ ಶ್ರೀನಿವಾಸ್ ಹಳಬರು ಎಂದಿರುವ ಸಲೀಂವುಲ್ಲಾ ಖಾನ್ ವಾಣಿಜ್ಯ ಮಂಡಳಿಯಿಂದ ನನಗೆ ನ್ಯಾಯ ಸಿಗದ್ದಿದ್ದರೆ ಕೋರ್ಟ್ ಗೆ ಹೋಗುವುದಾಗಿ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
Advertisement