
ಮುಂಬೈ: ಕಾಸ್ಮೆಟಿಕ್ ಉತ್ಪನ್ನ ಲಾರಿಯಲ್ ಪ್ಯಾರಿಸ್ ನ ಪ್ರಚಾರ ರಾಯಭಾರಿಯಾಗಿ ಕಳೆದ ವರ್ಷ ಕಾನ್ ಅಂತರಾಷ್ಟ್ರೀಯ ಸಿನೆಮೋತ್ಸವದ ಕೆಂಪು ಹಾಸಿನ ಮೇಲೆ ನಡೆದಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಈ ವರ್ಷ ಪೂರ್ವನಿಯೋಜಿತ ಕೆಲಸಗಳಿಂದ ಈ ವರ್ಷದ ಸಿನೆಮೋತ್ಸವವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಕಲಾವಿದರಿಗೆ ಅದ್ಭುತ ವೇದಿಕೆಯಾದ ಈ ಸಿನೆಮೋತ್ಸವನ್ನು ತಪ್ಪಿಸಿಕೊಳ್ಳುತ್ತಿರುವುದಕ್ಕೆ ಬೇಸರವಾಗಿದೆ ಏಕೆಂದರೆ ಈ ವರ್ಷದ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೇನೆ, ತುದಿಗಾಲಲ್ಲಿ ನಿಂತು ಕೆಲಸ ಮಾಡುತ್ತಿದ್ದೇನೆ. ಮುಂದಿನ ವರ್ಷವಾದರೂ ಹೋಗಬೇಕು ಎಂದಿದ್ದಾರೆ ನಟಿ.
"ಕಲಾವಿದರಿಗೆ ಅದ್ಭುತ ವೇದಿಕೆ ಕಾನ್. ಕಳೆದ ವರ್ಷ ಒಳ್ಳೆಯ ಅನುಭವ. ಈ ವರ್ಷವೂ ಲಾರಿಯಲ್ ನನ್ನನ್ನು ಆಹ್ವಾನಿಸಿದೆ, ಆದರೆ ಪೂರ್ವನಿಯೋಜಿತ ಕೆಲಸಗಳಿಂದ ಬರಲಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದೇನೆ" ಎಂದು ಕತ್ರಿನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದ್ಯಕ್ಕೆ ನಿರ್ದೇಶಕ ಅನುರಾಗ್ ಬಸು ಅವರ ಹಾಸ್ಯ ಚಿತ್ರ 'ಜಗ್ಗು ಜಾಸೂಸ್' ಸಿನೆಮಾದಲ್ಲಿ ನಿರತರಾಗಿದ್ದಾರೆ ಮತ್ತು ಇದರ ನಂತರ 'ಬಾರ್ ಬಾರ್ ದೇಖೋ' ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಮೇ ೧೧ ರಿಂದ ಮೇ ೨೧ರವರೆಗೆ ಕಾನ್ ಅಂತರಾಷ್ಟ್ರೀಯ ಸಿನೆಮೋತ್ಸವ ಜರುಗಲಿದೆ. ಲಾರಿಯಲ್ ಪ್ಯಾರಿಸ್ ನ ಪ್ರಚಾರ ರಾಯಭಾರಿಗಳಾಗಿ ಐಶ್ವರ್ಯ ರಾಯ್ ಬಚ್ಚನ್ ಮತ್ತು ಸೋನಮ್ ಕಪೂರ್ ಭಾಗವಹಿಸಲಿದ್ದಾರೆ.
Advertisement