
ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ರಾಜಾಹುಲಿ ಚಿತ್ರದ ನಿರ್ದೇಶಕ ಗುರುದೇಶಪಾಂಡೆ ನಿರ್ದೇಶನದ ಜಾನ್ ಜಾನಿ ಜನಾರ್ಧನ್ ಚಿತ್ರ ಮೇ 9ಕ್ಕೆ ಸೆಟ್ಟೇರಲಿದ್ದು, ಮೇ 1ಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೆ ಚಿತ್ರ ತಂಡ ತೀರ್ಮಾನಿಸಿದೆ.
ಚಿತ್ರ ತಂಡದ ಖುಷಿಗೆ ಕಾರಣವಾದ ಮತ್ತೊಂದು ಸಂಗತಿ ಎಂದರೆ ಮಲ್ಪಿಸ್ಟಾರ್ ಚಿತ್ರವಾದ ಜಾನ್ ಜಾನಿ ಜನಾರ್ಧನ್ ಚಿತ್ರದಲ್ಲಿ ಅಜೇಯ ರಾವ್, ಯೋಗಿ ಮತ್ತು ಮದರಂಗಿ ಕೃಷ್ಣ ಜತೆಗೆ ಮಾಲಾಶ್ರೀ ಸಹ ಕಾಣಿಸಿಕೊಳ್ಳುತ್ತಿರುವುದು.
ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ಅವರಿಗೆ ತಮ್ಮದೆ ಆದ ವರ್ಚಸ್ಸು ಹೊಂದಿದ್ದಾರೆ. ಹಿರೋಗಳಂತೆ ಮಾಲಾಶ್ರೀ ಸಹ ನಾಯಕಿ ಪ್ರಧಾನ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ನನ್ನ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿರುವುದು ಸಂತಸದ ವಿಷಯ. ಜಾನ್ ಜಾನಿ ಜನಾರ್ಧನ್ ಚಿತ್ರದಲ್ಲಿ ಮಾಲಾಶ್ರೀ ಅವರಿಗೆ ಪ್ರಮುಖ ಪಾತ್ರ ಅವರಿಂದಾಗಿಯೇ ಚಿತ್ರ ಕೆಲವೊಂದು ಟರ್ನ್ ಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರ್ದೇಶಕ ಗುರುದೇಶಪಾಂಡೆ ಹೇಳಿದ್ದಾರೆ.
ಚಿತ್ರ ಎಂ.ಆರ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದ್ದು, ಎಲ್ ಪದ್ಮನಾಭ್, ಕೆ. ಗಿರೀಶ್ ಮತ್ತು ಶಶಿಕಿರಣ್ ನಿರ್ಮಿಸುತ್ತಿದ್ದಾರೆ.
Advertisement