ಗೋಲ್ಡನ್ ಸ್ಚಾರ್ ಗಣೇಶ್ ಚೆಲ್ಲಾಟಕ್ಕೆ 10 ವರ್ಷ

ಖಾಸಗಿ ವಾಹಿನಿಯ ಕಾಮಿಡಿ ಟೈಮ್ಸ್ ಎಂಬ ಶೋ ಮೂಲಕ ಸಾಕಷ್ಟು ಜನರ ಮನಗೆದಿದ್ದ ನಟ ಗಣೇಶ್ ಅವರು ನಂತರ ಸತತ ಯಶಸ್ಸು ಚಿತ್ರಗಳನ್ನು ನೀಡುವ ಮೂಲಕ ರಾತ್ರೋರಾತ್ರಿ ಗೋಲ್ಡನ್ ಸ್ಟಾರ್ ಆಗಿ ಬಿಟ್ಟರು...
ಗೋಲ್ಡನ್ ಸ್ಚಾರ್ ಗಣೇಶ್
ಗೋಲ್ಡನ್ ಸ್ಚಾರ್ ಗಣೇಶ್
Updated on

ಖಾಸಗಿ ವಾಹಿನಿಯ ಕಾಮಿಡಿ ಟೈಮ್ಸ್ ಎಂಬ ಶೋ ಮೂಲಕ ಸಾಕಷ್ಟು ಜನರ ಮನಗೆದಿದ್ದ ನಟ ಗಣೇಶ್ ಅವರು ನಂತರ ಸತತ ಯಶಸ್ಸು ಚಿತ್ರಗಳನ್ನು ನೀಡುವ ಮೂಲಕ ರಾತ್ರೋರಾತ್ರಿ ಗೋಲ್ಡನ್ ಸ್ಟಾರ್ ಆಗಿ ಬಿಟ್ಟರು. ಇದೀಗ ಸ್ಯಾಂಡಲ್ ವುಡ್ ನಲ್ಲಿ ಗೋಲ್ಟನ್ ಸ್ಟಾರ್ ಆಗಿಯೇ ಮಿಂಚುತ್ತಿರುವ ಗಣೇಶ್ ಚಿತ್ರರಂಗಕ್ಕೆ ನಟರಾಗಿ ಕಾಲಿಟ್ಟ 10 ವರ್ಷದ ಸಂಭ್ರಮದಲ್ಲಿದ್ದಾರೆ.

ತಮ್ಮ ಚಿತ್ರರಂಗದ ಜೀವನದ ಸಂಸತ ಹಾಗೂ ಏಳೂ ಬೀಳುಗಳ ಕುರಿತಂತೆ ಮಾತನಾಡಿರುವ ಗೋಲ್ಡನ್ ಸ್ಚಾರ್ ಗಣೇಶ್ ಅವರು, ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 10 ವರ್ಷವಾಗುತ್ತಿದೆ. ಮೊದಲ ಚಿತ್ರದಲ್ಲಿ ಪಟ್ಟ ಕಷ್ಟಗಳು ನೆನಪಾಗುತ್ತಿದೆ. ನಟನಾಗಿ ಅಭಿನಯಿಸಿದ ಮೊದಲ ಚಿತ್ರ ಚೆಲ್ಲಾಟ 2006 ಏ.21 ರಂದು ಬಿಡುಗಡೆಯಾಗಿತ್ತು. ಕಠಿಣ ಶ್ರಮ ಹಾಗೂ ಅದೃಷ್ಟದ ಆಶೀರ್ವಾದ ಉತ್ತಮ ಅವಕಾಶಗಳನ್ನು ನೀಡುತ್ತದೆ. ಆಸೆಗಳಿಗೆ ಮಿತಿಯಿರುವುದಿಲ್ಲ. ಚಿತ್ರರಂಗಕ್ಕೆ ಬಂದಾಗಿನಿಂದಲೂ ನಟನಾಗಬೇಕೆಂದು ಆಸೆ ಪಟ್ಟಿದ್ದೆ. ಇದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೆ. ಇದರಂತೆ ಅವಕಾಶ ಕೂಡ ನನ್ನ ಹುಡುಕಿ ಬಂತು. ನನ್ನ ಆಸೆಯಂತೆಯೇ ಎಲ್ಲವೂ ನನಸಾಯಿತು. ನನ್ನ ಗುರಿಯನ್ನು ತಲುಪಿದೆ ಎಂದು ಹೇಳಿದ್ದಾರೆ.

ಈ ವರೆಗೂ 44 ಚಿತ್ರಗಳನ್ನು ಮಾಡಿದ್ದು, ಪ್ರಸ್ತುತ ಸ್ಟೈಲ್ ಕಿಂಗ್, ಜೂಮ್, ಪಟಾಕಿ, ಮುಂಗಾರು ಮಳೆ 2 ಚಿತ್ರಗಳು ಕೈಯಲ್ಲಿವೆ. ನಾನು ಮಾಡಿದ ಎಲ್ಲಾ ಚಿತ್ರಗಳನ್ನು ನನ್ನ ಜೀವನದ ತಿರುವಿಗೆ ಕಾರಣವಾಗಿದೆ.

ಹೀರೋ ಆಗಬೇಕಾದರೆ ಮೊದಲು ಉತ್ತಮ ನಟನಾಗಬೇಕು. ಕಾಮಿಡಿ ಟೈಮ್ಸ್ ನಂತರ ನನಗೆ ಪೋಷಕ ನಟ ಪಾತ್ರಗಳು ಹುಡುಕಿ ಬಂತು. ನಂತರ ಇದೇ ಪಾತ್ರಗಳು ನನ್ನ ಗುರಿ ತಲುಪಲು ಕಾರಣವಾಯಿತು. ಯಾರೂ ಮಾಡದಿರುವ ನಟನೆಯನ್ನು ಮಾಡಬೇಕು ಎಂಬ ಆಸೆಯಿದೆ. ಅದಕ್ಕಾಗಿ ಇಂದಿಗೂ ಶ್ರಮ ಪಡುತ್ತಿದ್ದೇನೆ.

ಚಿತ್ರ ಯಶಸ್ವಿಯಾಗಲಿ ಆಗದೆ ಇರಲಿ. ಒಬ್ಬ ನಟನಾಗಿ ನಾನು ಶ್ರಮ ಪಡುತ್ತೇನೆ. ಚಿತ್ರ ಹಿಟ್ ಆಗುವುದಕ್ಕೇ ಫಾರ್ಮುಲಾ ಎಂಬುದಿಲ್ಲ. ಕಥೆ ಚೆನ್ನಾಗಿದ್ದರೆ ಸಿನಿಮಾ ಹಿಟ್ ಆಗುತ್ತದೆ. ಇದಕ್ಕಾಗಿ ನಟ ಕೂಡ ಪರಿಶ್ರಮ ಪಡಬೇಕು. ಕೆಟ್ಟ ನಟನೆಂದು ಹೆಸರು ಪಡೆಯಲು ಯಾರು ಇಷ್ಟಪಡುವುದಿಲ್ಲ. ಕೆಟ್ಟ ನಟ ಎಂಬ ಪದ ಕೇಳಲೂ ಯಾರು ಇಷ್ಟ ಪಡುವುದಿಲ್ಲ. ಇದಕ್ಕೆ ನಾನು ಎಂದಿಗೂ ಅವಕಾಶವನ್ನು ಕೊಟ್ಟಿಲ್ಲ. ಪ್ರತಿಯೊಂದು ಸಿನಿಮಾಗೂ ಕಠಿಣ ಶ್ರಮವನ್ನು ಪಡುತ್ತೇನೆಂದು ಹೇಳಿದ್ದಾರೆ.

ಮುಖ್ಯವಾದ ಸಿನಿಮಾವೊಂದು ಬರಬೇಕಿದೆ. ವಿಭಿನ್ನ ಪಾತ್ರಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದೇನೆ. ಇದಕ್ಕಾಗಿ ಪ್ರತೀ ದಿನ ವಿವಿಧ ಜನರನ್ನು ಭೇಟಿಯಾಗುತ್ತಿರುತ್ತೇನೆ. ಎಲ್ಲರಂತೆ ನಾನು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇನೆ. ಕೆಲವೊಮ್ಮ ಆ ನಿರ್ಣಯಗಳು ತಪ್ಪಾಗಬಹುದು. ವಿಲಿಯಂ ಷೇಕ್ಸ್‌ಪಿಯರ್ ಅವರೇ ಹೇಳಿರುವಂತೆ ಕೆಟ್ಟ ಜನರು ಜೀವನದಲ್ಲಿ ಒಳ್ಳೆಯ ಪಾಠಗಳನ್ನು ಕಲಿಯುವಂತೆ ಮಾಡುತ್ತಾರೆ. ಇದನ್ನು ನಾನು ಒಪ್ಪುತ್ತೇನೆ. ಪ್ರತಿಯೊಬ್ಬರ ಜೀವನದಲ್ಲೂ ಇದು ಆಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com