ಕಲ್ಪನಾ-2 ಚಿತ್ರದಲ್ಲಿ ಉಪೇಂದ್ರಗೆ ಕನ್ನಡ ನಾಡ ಗೀತೆ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ ಹಾರರ್ ಸಿನಿಮಾ ಕಲ್ಪನಾ-2 ಚಿತ್ರಕ್ಕಾಗಿ ಕನ್ನಡ ಭಾಷೆ ಮತ್ತು ಕರ್ನಾಟಕ ರಾಜ್ಯ ಕುರಿತಂತೆ ನಾಡ ಗೀತೆಯನ್ನು ಬರೆಯಲಾಗಿದೆ.
ಉಪೇಂದ್ರ ಮತ್ತು ಆಂವತಿಕ ಶೆಟ್ಟಿ
ಉಪೇಂದ್ರ ಮತ್ತು ಆಂವತಿಕ ಶೆಟ್ಟಿ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ ಹಾರರ್ ಸಿನಿಮಾ ಕಲ್ಪನಾ-2 ಚಿತ್ರಕ್ಕಾಗಿ ಕನ್ನಡ ಭಾಷೆ ಮತ್ತು ಕರ್ನಾಟಕ ರಾಜ್ಯ ಕುರಿತಂತೆ ನಾಡ ಗೀತೆಯನ್ನು ಬರೆಯಲಾಗಿದೆ.

ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಉಪೇಂದ್ರ ಅವರಿಗಾಗಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ, ನನ್ನನ್ನು ಸಿಗಿದು ಹಾಕಿದರೂ ಕನ್ನಡ,  ಕೊಚ್ಚಿ ಹಾಕಿದರು ಕನ್ನಡ, ಚುಚ್ಚಿದ್ರು ಕನ್ನಡ, ಕರುನಾಡೇ ನನ್ನ ದೈವ, ಕಾವೇರಿ ನನ್ನ ಜೀವ ಎಂಬ ಸಾಲುಗಳನ್ನು ಚಿತ್ರದ ಹಾಡಿಗೆ ಸಾಹಿತ್ಯ ಬರೆಯಲಾಗಿದೆ ಎಂದು ನಿರ್ದೇಶಕ ಅನಂತ ರಾಜು ಹೇಳಿದ್ದಾರೆ.

ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿಗೆ ನಟ ಪುನೀತ್ ರಾಜ್ ಕುಮಾರ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಕಲ್ಪನಾ-2 ಚಿತ್ರವು ತಮಿಳಿನ ಕಾಂಚನಾ -2 ಚಿತ್ರದ ರಿಮೇಕ್ ಆಗಿದೆ.

ಕಾಂಚನಾ-2 ಚಿತ್ರದ ಆರಂಭದಲ್ಲಿ ದೆವ್ವಗಳ ಬಗ್ಗೆ ಹಾಡನ್ನು ಚಿತ್ರೀಕರಿಸಲಾಗಿದೆ. ಆದರೆ ಕನ್ನಡದ ಕಲ್ಪನಾ -2 ನಲ್ಲಿ ನಾಡ ಗೀತೆಯನ್ನು ಅಳವಡಿಸಲಾಗುತ್ತಿದೆ ಎಂದು ಚಿತ್ರತಂಡ  ಹೇಳಿದೆ.

ಇನ್ನು ಈ ಹಾಡಿನಲ್ಲಿ ಉಪೇಂದ್ರ ಅಭಿನಯಿಸಿರುವ 20 ಚಿತ್ರಗಳ ಹೆಸರುಗಳನ್ನು ಸಾಹಿತ್ಯವಾಗಿ ಬಳಸಿಕೊಳ್ಳಲಾಗಿದೆ. ಪ್ರಿಯಾಮಣಿ ಮತ್ತು ಆವಂತಿಕ ಶೆಟ್ಟಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com