ದೀಪಿಕಾಗೆ ನಿಶ್ಚಿತಾರ್ಥದ ಶುಭಾಶಯಗಳು; ಹೇಮಮಾಲಿನಿ ಟ್ವೀಟ್

ಬಾಲಿವುಡ್ ಹಿರಿಯ ನಟಿ ಹೇಮ ಮಾಲಿನಿ ತಮ್ಮ ಟ್ವಿಟ್ಟರ್ ಪುಟದಲ್ಲಿ ದೀಪಿಕಾಗೆ ನಿಶ್ಚಿತಾರ್ಥದ ಅಭಿನಂದನೆ ಸಲ್ಲಿಸಿ...
ಬಾಲಿವುಡ್ ನಟಿ ಹಾಗೂ ಸಂಸದೆ ಹೇಮ ಮಾಲಿನಿ
ಬಾಲಿವುಡ್ ನಟಿ ಹಾಗೂ ಸಂಸದೆ ಹೇಮ ಮಾಲಿನಿ
Updated on

ಮುಂಬೈ: ಬಾಲಿವುಡ್ ಹಿರಿಯ ನಟಿ ಹೇಮ ಮಾಲಿನಿ ತಮ್ಮ ಟ್ವಿಟ್ಟರ್ ಪುಟದಲ್ಲಿ ದೀಪಿಕಾಗೆ ನಿಶ್ಚಿತಾರ್ಥದ ಅಭಿನಂದನೆ ಸಲ್ಲಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

''ನಿಶ್ಚಿತಾರ್ಥ ನೆರವೇರಿಸಿಕೊಂಡ ದೀಪಿಕಾಗೆ ಅಭಿನಂದನೆಗಳು. ನಿಮ್ಮಿಬ್ಬರ ಜೀವನ
ಸಂತೋಷ ಮತ್ತು ಖುಷಿಯಿಂದ ತುಂಬಿರಲಿ'' ಎಂದು ಹರಸಿದ್ದಾರೆ.ಇದನ್ನು ಓದಿದ ಹೇಮ ಮಾಲಿನಿ ಅಭಿಮಾನಿಗಳು ಮತ್ತು ಅನುಯಾಯಿಗಳು ಆಶ್ಚರ್ಯಚಕಿತರಾಗಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಅಭಿಮಾನಿಗಳಿಂದ ಪ್ರಶ್ನೆಯ ಸುರಿಮಳೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮದುವೆ ನಿಶ್ಚಯವಾಯಿತೇ? ಯಾರ ಜೊತೆ?

ಆಗ ತಕ್ಷಣ ಜಾಗ್ರತರಾದ ಹೇಮ ಮಾಲಿನಿ ಅದಕ್ಕೆ ಪ್ರತಿಕ್ರಿಯೆ ನೀಡಿ, ಅದು ಮಿಸ್ ಪಡುಕೋಣೆ ಅಲ್ಲ, ಬೇರೆ ದೀಪಿಕಾ, ನನ್ನನ್ನು ಟ್ವಿಟ್ಟರ್ ನಲ್ಲಿ ಅನುಸರಿಸುತ್ತಿರುವ ಅನುಯಾಯಿ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್ ಹೀರೋ ರಣವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯಿದೆ. ಹಾಲಿವುಡ್ ನಟರಾದ ರೂಬಿ ರೋಸ್, ವಿನ್ ಡೀಸೆಲ್, ನೀನಾ ಡೋಬ್ರಿವ್ ಮೊದಲಾದವರೊಂದಿಗೆ ಆಕೆ ಈಗ ಕೆನಡಾದಲ್ಲಿ  xXx: The Return of Xander Cage ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com