
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರ ಕನ್ನಡ ಚಿತ್ರರಂಗದ ಹಳೆಯ ದಾಖಲೆಗಳನ್ನು ಸರಿಗಟ್ಟಿದೆ ಎಂದು ಹೇಳಲಾಗುತ್ತಿದೆ.
ಚಕ್ರವ್ಯೂಹ ಚಿತ್ರ ವಿಶ್ವದಾದ್ಯಂತ ಬರೋಬ್ಬರಿ 500 ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಭರ್ಜರಿ ಓಪನಿಂಗ್ ಸಿಕ್ಕಿದೆ. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಚಕ್ರವ್ಯೂಹ ಚಿತ್ರ ಮೊದಲ ದಿನದ ಕಲೆಕ್ಷನ್ ಸುಮಾರು 11 ಕೋಟಿ ರುಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ ಈ ಹಿಂದಿನ ರಣವಿಕ್ರಮ ಚಿತ್ರ ಭರ್ಜರಿ ಓಪನಿಂಗ್ ಪಡೆದಿತ್ತು. ಬಳಿಕ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ವಿಫಲವಾಗಿತ್ತು. ಆದರೆ ತಮಿಳು ನಿರ್ದೇಶಕ ಶರವಣನ್ ಪ್ರೇಕ್ಷಕರು ಮೆಚ್ಚುವಂತ ಚಿತ್ರವನ್ನು ಕೊಟ್ಟಿದ್ದಾರೆ.
ಬಹುತಾರಾಗಣ ಹೊಂದಿರುವ ಚಕ್ರವ್ಯೂಹ ಚಿತ್ರದಲ್ಲಿ ಪುನೀತ್, ರಚಿತಾರಾಮ್, ಅರುಣ್ ವಿಜಯ್, ಅಭಿಮನ್ಯು ಸಿಂಗ್, ಭವ್ಯಾ, ಸಿತಾರಾ, ಸಾಧು ಕೋಕಿಲ ಅಭಿನಯಿಸಿದ್ದಾರೆ. ಇನ್ನು ಚಿತ್ರಕ್ಕೆ ತಮನ್ ಸಂಗೀತ ನೀಡಿದ್ದಾರೆ.
Advertisement