ಸುದೀಪ್ ನಟನೆಯಿಂದ ಸ್ಫೂರ್ತಿಗೊಂಡೆ: ನಿತ್ಯ ಮೆನನ್

ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ 'ಕೋಟಿಗೊಬ್ಬ2'/ 'ಮುಡಿಂಜ ಇವನ್ ಪುಡಿ' ಸಿನೆಮಾದ ನಟಿ ನಿತ್ಯ ಮೆನನ್ 'ಮೈನಾ' ಸಿನೆಮಾದ ನಂತರ ಮತ್ತೆ ಈಗ ಕನ್ನಡ
ಕೋಟಿಗೊಬ್ಬ2 ಸಿನೆಮಾದಲ್ಲಿ ನಿತ್ಯಾ ಮೆನನ್ ಮತ್ತು ಸುದೀಪ್
ಕೋಟಿಗೊಬ್ಬ2 ಸಿನೆಮಾದಲ್ಲಿ ನಿತ್ಯಾ ಮೆನನ್ ಮತ್ತು ಸುದೀಪ್
Updated on
ಬೆಂಗಳೂರು: ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ 'ಕೋಟಿಗೊಬ್ಬ2'/ 'ಮುಡಿಂಜ ಇವನ್ ಪುಡಿ' ಸಿನೆಮಾದ ನಟಿ ನಿತ್ಯ ಮೆನನ್ 'ಮೈನಾ' ಸಿನೆಮಾದ ನಂತರ ಮತ್ತೆ ಈಗ ಕನ್ನಡ ಚಿತ್ರರಂಗಕ್ಕೆ ಹಿಂದಿರುಗಿದ್ದು, ಸಿನೆಮಾದ ಸಹನಟ ಸುದೀಪ್ ನಟನೆ ಸ್ಫೂರ್ತಿ ನೀಡಿತು ಎನ್ನುತ್ತಾರೆ. 
"ಅವರನ್ನು (ಸುದೀಪ್) ಪ್ರತಿ ಬಾರಿ ನೋಡಿದಾಗ ಅವರಿಗೊಂದು ಪಾತ್ರ ಬರೆಯಲು ಸ್ಫೂರ್ತಿ ಬರುತ್ತದೆ. ಬೇರೆ ನಟರ ಬಗ್ಗೆ ನನಗೆ ಸಾಮಾನ್ಯವಾಗಿ ಹೀಗನ್ನಿಸುವುದಿಲ್ಲ. ನಾನು ಬರೆದಿರುವ ಮೂರೂ ನಾಲ್ಕು ಸಣ್ಣ ಕಥೆಗಳನ್ನು ಅವರಿಗೆ ಹೇಳಿದೆ. ಅವರು ನನಗೆ ಸಿನೆಮಾ ಮಾಡುವಂತೆ ಉತ್ತೇಜಿಸಿ ಅದರ ಭಾಗವಾಗುವುದಾಗಿ ಕೂಡ ತಿಳಿಸಿದರು" ಎನ್ನುತ್ತಾರೆ ನಿತ್ಯಾ. 
ಅಷ್ಟೇನೂ ಸಿನೆಮಾ ಹುಚ್ಚಿ ಅಲ್ಲದ ತಮಗೆ ನಿರ್ದೇಶಕ ಕೆ ಎಸ್ ರವಿಕುಮಾರ್ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ ಎನ್ನುವ ಅವರು, ರವಿಕುಮಾರ್ ನಿರ್ದೇಶನದ 'ಪಡೆಯಪ್ಪ' ಸಿನೆಮಾ ಮಾತ್ರ ನೋಡಿದ್ದೆ ಎನ್ನುತ್ತಾರೆ. "ನಾವಿಬ್ಬರು ವಿಬ್ಭಿನ್ನ ಜಗತ್ತಿನಿಂದ ಬಂದವರು" ಎನ್ನುವ ಅವರು "ನಾವು ಬಹಳ ವಾದ ಮಾಡಿದೆವು... ಸಿನೆಮಾ ಬಗ್ಗೆ ನನ್ನ ಗ್ರಹಿಕೆ ಮತ್ತು ಅವರದ್ದು ಬಹಳ ವಿಭಿನ್ನ ಎನ್ನುತ್ತಾರೆ".
ಸಾಮಾನ್ಯವಾಗಿ ನಟಿಗೆ, ನಟನಷ್ಟೇ ಪ್ರಾಮುಖ್ಯತೆ ಮತ್ತು ಸ್ಕ್ರೀನ್ ಸಮಯ ನೀಡುವ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವ ನಿತ್ಯ "ಎಲ್ಲಿ ಎಲ್ಲವು ಹೊರ ರೀತಿಯದಾಗಿತ್ತು. ಕಮರ್ಷಿಯಲ್ ಸಿನೆಮಾಗಳೆಡೆಗೆ ನಿರ್ದೇಶಕನಿಗೆ ಇದ್ದ ದೃಷ್ಟಿ ಅಚ್ಚರಿ ತರಿಸಿತು. ಇದರಲ್ಲಿ ನಟನದ್ದೇ ಹೆಚ್ಚು ಪ್ರಾಮುಖ್ಯತೆ, ಹೀರೋಯಿನ್ ಗಳದ್ದು ಪೋಷಕ ಪಾತ್ರದ ರೀತಿಯದ್ದು" ಎನ್ನುತ್ತಾರಷ್ಟೇ ನಟಿ. 
"ಆದರೆ ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡ ಮೇಲೆ, ರವಿಕುಮಾರ್ ಬಹಳ ಆತ್ಮೀಯರಂತೆ ಕಂಡರೂ. ನಂತರ ಎಲ್ಲವು ಸುಗಮವಾಗಿತ್ತು" ಎನ್ನುತ್ತಾರೆ ನಟಿ. 
ಹೆಚ್ಚು ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವ ನಟಿ "ನನಗೆ ಹಲವಾರು ಬಾಲಿವುಡ್ ಅವಕಾಶಗಳು ಬಂದಿದ್ದವು ಆದರೆ ಯಾವುದು ಆಸಕ್ತಿದಾಯಕವಾಗಿರಲಿಲ್ಲ. ಆದುದರಿಂದ ಕೈಬಿಟ್ಟೆ" ಎನ್ನುತ್ತಾರಷ್ಟೇ ನಿತ್ಯಾ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com