ತಮಿಳಿನ ಜನಪ್ರಿಯ ನಟರಾದ ರಜನಿಕಾಂತ್ ಮತ್ತು ಕಮಲ ಹಾಸನ್
ತಮಿಳಿನ ಜನಪ್ರಿಯ ನಟರಾದ ರಜನಿಕಾಂತ್ ಮತ್ತು ಕಮಲ ಹಾಸನ್

ಕಮಲ ಹಾಸನ್ ನಮ್ಮ ಪೀಳಿಗೆಯ ಶಿವಾಜಿ: ರಜನಿಕಾಂತ್

ಫ್ರೆಂಚ್ ಗೌರವ 'ದ ನೈಟ್ ಆಫ್ ದ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್'ಗೆ ಭಾಜನರಾಗಿರುವವ ಸಹನಟ-ನಿರ್ದೇಶಕ ಕಮಲ ಹಾಸನ್ ಅವರಿಗೆ ಮೆಗಾಸ್ಟಾರ್ ರಜನಿಕಾಂತ್ ಅಭಿನಂದಿಸಿದ್ದಾರೆ.
Published on
ಚೆನ್ನೈ: ಫ್ರೆಂಚ್ ಗೌರವ 'ದ ನೈಟ್ ಆಫ್ ದ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್'ಗೆ ಭಾಜನರಾಗಿರುವವ ಸಹನಟ-ನಿರ್ದೇಶಕ ಕಮಲ ಹಾಸನ್ ಅವರಿಗೆ ಮೆಗಾಸ್ಟಾರ್ ರಜನಿಕಾಂತ್ ಅಭಿನಂದಿಸಿದ್ದಾರೆ. ಕಮಲ ಹಾಸನ್ ನಮ್ಮ ಪೀಳಿಗೆಯ ಶಿವಾಜಿ ಗಣೇಶನ್ ಎಂದು ಕೂಡ ಅವರು ಹೇಳಿದ್ದಾರೆ.
"ನಮ್ಮ ಪೀಳಿಗೆಯ ಶೆವಲಿಯರ್ ಶಿವಾಜಿ ಮತ್ತು ನನ್ನ ಒಳ್ಳೆಯ ಗೆಳೆಯ ಕಮಲ ಹಾಸನ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಗಳು" ಎಂದು ರಜನಿಕಾಂತ್ ತಮಿಳಿನಲ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ. 
20 ನೇ ಶತಮಾನದ ಎರಡನೇ ಭಾಗದಲ್ಲಿ ತಮಿಳು ಚಿತ್ರರಂಗವನ್ನು ಆಳಿದ ಮೇರು ನಟ ಶಿವಾಜಿ ಗಣೇಶನ್. ತಮ್ಮ ಐದು ವರ್ಷಗಳ ವೃತ್ತಿಜೀವನದಲ್ಲಿ 300 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು. ಶೆವಲಿಯರ್ ಪ್ರಶಸ್ತಿ ಗಳಿಸಿದ ಮೊದಲ ತಮಿಳು ನಟ ಎಂಬ ಗೌರವಕ್ಕೂ ಅವರು ಭಾಜನರಾಗಿದ್ದರು. 
ಕಮಲ ಹಾಸನ್ ಈ ಪ್ರಶಸ್ತಿಯನ್ನು ತಮ್ಮ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಅರ್ಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com