ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್
ಸಿನಿಮಾ ಸುದ್ದಿ
ಶಾರುಕ್ ಖಾನ್ ಗಾಗಿ ಪೇಶಾವರಿ ಚಪ್ಪಲಿ ಸಿದ್ಧಪಡಿಸಿದ್ದ ಪಾಕಿಸ್ತಾನಿ ಜೈಲುಪಾಲು!
ಜಿಂಕೆ ಚರ್ಮದಿಂದ ಬಾಲಿವುಡ್ ಸೂಪರ್ ಸ್ಟಾರ್ ಅವರಿಗೆ ಪೇಶಾವರಿ ಚಪ್ಪಲಿ ಸಿದ್ಧಪಡಿಸಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿದ್ದ ಪಾಕಿಸ್ತಾನಿ ಚಮ್ಮಾರರೊಬ್ಬರು ಬಂಧನಕ್ಕೊಳಗಾಗಿದ್ದಾರೆ.
ಜಿಂಕೆ ಚರ್ಮದಿಂದ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರಿಗೆ ಪೇಶಾವರಿ ಚಪ್ಪಲಿ ಸಿದ್ಧಪಡಿಸಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿದ್ದ ಪಾಕಿಸ್ತಾನಿ ಚಮ್ಮಾರರೊಬ್ಬರು ಬಂಧನಕ್ಕೊಳಗಾಗಿದ್ದಾರೆ.
ವರದಿಗಳ ಪ್ರಕಾರ, ಪೇಶಾವರದಲ್ಲಿ ವಾಸಿಸುವ ಶಾರುಕ್ ಖಾನ್ ಅವರ ಸೋದರ ಸಂಬಂಧಿಯೊಬ್ಬರು, ಪೇಶಾವರ ಚಪ್ಪಲಿ ತಯಾರಿಸುವ ಚಮ್ಮಾರ ಜಹಾಂಗೀರ್ ಖಾನ್ ಬಳಿ ಶುಕ್ರವಾರ ತೆರಳಿ ಬಾಲಿವುಡ್ ಸೂಪರ್ ಸ್ಟಾರ್ ಗಾಗಿ ಒಂದು ಜೊತೆ ಪೇಶಾವರಿ ಚಪ್ಪಲಿಗಾಗಿ ಬೇಡಿಕೆಯಿಟ್ಟಿದ್ದರು.
"ಶಾರುಕ್ ಖಾನ್ ಅವರ ದೊಡ್ಡ ಅಭಿಮಾನಿಯಾದ ಜಹಾಂಗೀರ್ ಖಾನ್, ನಟನಿಗೆ ವಿಶೇಷ ಉಡುಗೊರೆ ಕಳುಹಿಸಲು ನಿರ್ಧರಿಸಿದ್ದಾರೆ. ಪೇಶಾವರಿ ಚಪ್ಪಲಿಗಳನ್ನು ಜಿಂಕೆಯ ಚರ್ಮದಿಂದ ಮಾಡಲಾಗುತ್ತದೆ" ಎಂದು ಪ್ರಾದೇಶಿಕ ಪೊಲೀಸ್ ಹೇಳಿರುವುದಾಗಿ ವರದಿ ಮಾಡಲಾಗಿದೆ.
"ಈ ಸುದ್ದಿ ಶೀಘ್ರವಾಗಿ ಹರಡಿ, ವನ್ಯಜೀವಿ ಇಲಾಖೆಯ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿ ದೂರು ನೀಡಿದರು. ಆಗ ನಾವು ಜಹಾಂಗೀರ್ ಅವರನ್ನು ಬಂಧಿಸಬೇಕಾಯಿತು, ಈಗ ಅವರು ಜೈಲಿನಲ್ಲಿದ್ದಾರೆ" ಎಂದು ಕೂಡ ಪೊಲೀಸರು ಹೇಳಿದ್ದಾರೆ.
ತನಿಖೆ ಪ್ರಗತಿಯಲ್ಲಿದ್ದು, ಈ ಚಪ್ಪಲಿಗಳನ್ನು ಮಾಡಲು ಜಿಂಕೆ ಚರ್ಮವನ್ನು ಜಹಾಂಗೀರ್ ಬಳಸಿದ್ದಾರೆಯೇ ಎಂದು ಧೃಢಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. "ಅವರು ಜಿಂಕೆ ಚರ್ಮ ಬಳಸಿದ್ದರೆ, ವನ್ಯಜೀವಿ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗಲಿದ್ದಾರೆ" ಎಂದು ವನ್ಯಜೀವಿ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ