
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ನಟ ದುನಿಯಾ ವಿಜಿ ಆಭಿನಯದ ಮಾಸ್ತಿ ಗುಡಿ ಚಿತ್ರದಲ್ಲಿ ಚಿತ್ತಾರದ ಚೆಲುವೆ ಅಮೂಲ್ಯ 80ರ ದಶಕ ನೆನಪಿಸುವ ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚಲಿದ್ದಾರೆ.
ಮಾಸ್ತಿ ಗುಡಿಯಲ್ಲಿ ಅಮೂಲ್ಯ ಹಳೇ ಕಾಲದ ಹುಡುಗಿಯರಂತೆ ಲಂಗಾ ದಾವಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಪಾತ್ರದ ಕುರಿತಂತೆ ಅಮೂಲ್ಯ ಮಾತನಾಡಿದ್ದು, ಹಿಂದಿನ ಕಾಲದಲ್ಲಿ ಹಾಕಿಕೊಳ್ಳುತ್ತಿದ್ದ ಲಂಗಾ ದಾವಣಿ ಟ್ರೆಂಡ್ ನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ನಾನು ಸಾಂಪ್ರಾದಾಯಿತ ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮೂಗುತ್ತಿ ಹಾಗೂ ಆಕರ್ಷಣೀಯ ಬಣ್ಣಗಳ ಲಂಗಾ ದಾವಣಿಯಲ್ಲಿ ಕಾಣಿಸಿಕೊಳ್ಳುತ್ತೇನೆ. ನನ್ನ ಪಾತ್ರದಂತೆ ನನ್ನ ಲುಕ್ ಕೂಡ ಬ್ರೈಟ್ ಆಗಿದೆ. ನನ್ನ ಪಾತ್ರ ಈ ಹಿಂದೆ ಇದ್ದ ಎಲ್ಲಾ ಚಿತ್ರಗಳಿಗಿಂತಲೂ ಈ ಚಿತ್ರದಲ್ಲಿ ವಿಭಿನ್ನವಾಗಿದೆ. ಅತ್ಯಂತ ಮೃದು ಸ್ವಭಾವದ ಯುವತಿಯಾಗಿ ನಟಿಸುತ್ತಿದ್ದೇನೆಂದು ಹೇಳಿದ್ದಾರೆ.
ಮಾಸ್ತಿ ಗುಡಿ ಚಿತ್ರಕ್ಕಾಗಿ ಮೊದಲ ಬಾರಿಗೆ ಲೆನ್ಸ್ ಹಾಕಿಕೊಳ್ಳುತ್ತಿದ್ದೇನೆ. ನಿರ್ದೇಶಕರಿಗೆ ಬೆಕ್ಕಿನ ಕಣ್ಣು ಬೇಕಿದ್ದು, ನನ್ನ ಆತ್ಮ ಕೃತಿ ಅವರ ದೇಹಕ್ಕೆ ಹೋಗುತ್ತದೆ. ಹೀಗಾಗಿ ಕಣ್ಣುಗಳ ಬಣ್ಣ ಬದಲಾಗಬೇಕು ಎಂದು ಹೇಳಿದ್ದಾರೆ.
ಮಾಸ್ತಿ ಚಿತ್ರದ ಚಿತ್ರೀಕರಣ ಈಗಾಗಲೇ ಕೊನೆಯ ಹಂತ ತಲುಪಿದ್ದು, ಚಿತ್ರದ ಹಾಡೊಂದರಲ್ಲಿ ವಿಜಯ್ ಜೊತೆ ಅಮೂಲ್ಯ ಸ್ಟೆಪ್ ಹಾಕುತ್ತಿದ್ದಾರೆ. ಚಿತ್ರದ ಕೆಲ ಹಾಡು ಹಾಗೂ ಸಂಭಾಷಣೆ ಮಾತ್ರ ಭಾಗ ಬಾಕಿಯಿದ್ದು, ಇನ್ನು 10 ದಿನಗಳಲ್ಲಿ ಅದು ಪೂರ್ಣಗೊಳ್ಳುತ್ತದೆ ಎಂದು ಅಮೂಲ್ಯ ಹೇಳಿದ್ದಾರೆ.
ಮಾಸ್ತಿ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ನಿರ್ದೇಶಕ ನಾಗಶೇಖರ್ ಅವರು ಸಂಸತದಲ್ಲಿದ್ದಾರೆ. ಚಿತ್ರೀಕರಣ ಉತ್ತಮವಾಗಿ ಸಾಗುತ್ತಿದ್ದು, ಕೀರ್ತಿಯವರಿಗಾಗಿ ಕಾಯುತ್ತಿದ್ದೇವೆಂದು ನಾಗಶೇಖರ್ ಹೇಳಿದ್ದಾರೆ.
ಅಮೂಲ್ಯ ಪಾತ್ರದ ಕುರಿತಂತೆ ಮಾತನಾಡಿರುವ ಅವರು, ಚಿತ್ರದಲ್ಲಿ ಅಮೂಲ್ಯ ಕಾಲೇಜು ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟನ ಒಳ್ಳೆಯ ಗುಣಕ್ಕೆ ಸೋಲುವ ಆಕೆ ಪ್ರೀತಿಯಲ್ಲಿ ಬೀಳುತ್ತಾಳೆ. ನಂತರ ಅಮೂಲ್ಯ ಆತ್ಮ ಕೀರ್ತಿ ದೇಹಕ್ಕೆ ಸೇರಿಕೊಳ್ಳುತ್ತದೆ. ಇದು ಹಾರರ್ ಚಿತ್ರವಲ್ಲ. ಪಕ್ಕಾ ಕಮರ್ಷಿಯಲ್ ಸಿನಿಮಾನೇ ಎಂದು ಹೇಳಿದ್ದಾರೆ.
ಚಿತ್ರತಂಡಕ್ಕೆ ಚಿತ್ರೀಕರಣ ಕೊನೆಯ ಹಂತದಲ್ಲಿದೆ ಎಂಬ ಖುಷಿ ಒಂದೆಡೆಯಾಗಿದ್ದರೆ, ಆಡಿಯೋ ರೈಟ್ಸ್ ಸಿಕ್ಕಿರುವ ಖುಷಿ ಮತ್ತೊಂದೆಡೆಯಾಗಿದೆ. ಝಾಂಕರ್ ಆಡಿಯೋ ಸಂಸ್ಥೆ ರು.50 ಲಕ್ಷಕ್ಕೆ ಚಿತ್ರದ ಹಾಡುಗಳ ಹಕ್ಕನ್ನು ಖರೀದಿಸಿದೆ. ಕನ್ನಡ ಚಿತ್ರವೊಂದರ ಹಾಡಿನ ಹಕ್ಕು ಈ ಮಟ್ಟಿಗೆ ಮಾರಾಟ ಆಗಿರುವುದು ಅತ್ಯಂತ ವಿರಳವೇ ಎಂದು ಹೇಳಬಹುದು.
ಸಾಧುಕೋಕಿಲಾ ಅವರು ಅತ್ಯುತ್ತಮವಾಗಿ ಸಂಗೀತವನ್ನು ನೀಡಿದ್ದಾರೆ. ಸೋನು ನಿಗಂ ಮತ್ತು ಶ್ರೇಯಾ ಘೋಷಾಲ್ ಅವರು ಉತ್ತಮವಾಗಿ ಹಾಡಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಆಡಿಯೋ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ನಾಗಶೇಖರ್ ಹೇಳಿದ್ದಾರೆ.
Advertisement