
ಗೋಲಿ ಸೋಡಾ ಮೂಲಕ ಪ್ರಿಯಾಂಕಾ ಎಂ ಜೈನ್ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ಪ್ರವೇಶದ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಜೈನ್, ತಮ್ಮ ತಾಯಿಯ ಕನಸನ್ನು ನನಸು ಮಾಡುವುದಕ್ಕಾಗಿ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.
" ನನ್ನ ತಾಯಿಗೆ ಚಿತ್ರನಟಿಯಾಗಬೇಕೆಂಬ ಕನಸಿತ್ತು, ಆದರೆ ಆ ಕನಸು ನನಸಾಗಲಿಲ್ಲ. ಆದ್ದರಿಂದ ನಾನು ನಟಿಯಾಗಬೇಕೆಂಬುದು ನನ್ನ ತಾಯಿಯ ಆಸೆಯಾಗಿದೆ. ನನ್ನ ತಾಯಿಯ ಕನಸನ್ನು ಈಡೇರಿಸುವುದೇ ನನ್ನ ಕನಸು" ಎಂದಿದ್ದಾರೆ ಪ್ರಿಯಾಂಕ ಜೈನ್.
ಗೋಲಿ ಸೋಡಾ ತಮಿಳಿನ ರಿಮೇಕ್ ಆಗಿದ್ದರು ಪ್ರಿಯಾಂಕ ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ. " ತಮಿಳಿನಲ್ಲಿರುವ ಗೋಲಿ ಸೋಡಾ ಚಿತ್ರವನ್ನು ನೋಡಿದ್ದೇನೆ, ಚಿತ್ರದ ನಾಯಕಿಯ ಪಾತ್ರದಿಂದ ಪ್ರೇರಿತಗೊಂಡಿದ್ದೇನೆ, ಗೋಲಿ ಸೋಡಾ ಚಿತ್ರದಲ್ಲಿ ಸಾಮಾಜಿಕ ಸಂದೇಶವಿದ್ದು ಅದನ್ನು ಹೆಚ್ಚು ಪ್ರಚಾರ ಮಾಡಬೇಕಿದೆ ಎಂದು ಪ್ರಿಯಾಂಕ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ಚಿತ್ರದಲ್ಲಿ ಈಗಾಗಲೇ ನಿರ್ವಹಣೆಯಾಗಿರುವ ಪಾತ್ರವನ್ನು ಮತ್ತೊಮ್ಮೆ ಮಾಡಬೇಕಾದರೆ ಹೆಚ್ಚು ಜವಾಬ್ದಾರಿ ಇರುತ್ತದೆ. ಒಂದು ನೀವು ಮೂಲ ನಟನೆಗಿಂತ ಉತ್ತಮವಾಗಿ ನಟಿಸಬೇಕು, ಇಲ್ಲವೇ ಅಷ್ಟೇ ಉತ್ತಮವಾಗಿಯಾದರು ಮಾಡಬೇಕು ಎಂದು ಪ್ರಿಯಾಂಕ ತಿಳಿಸಿದ್ದಾರೆ.
ಗೋಲಿ ಸೋಡಾ ನಾನು ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿರುವ ಚಿತ್ರ, ಮುಂದೆ ಮತ್ತಷ್ಟು ಚಿತ್ರಗಳಲ್ಲಿ ನಟಿಸಲು ಬಯಸುತ್ತೇನೆ ಎಂದು ಪ್ರಿಯಾಂಕ ಜೈನ್ ತಿಳಿಸಿದ್ದಾರೆ. ಗೋಲಿ ಸೋಡಾ ಚಿತ್ರವನ್ನು ಕೊಲ್ಲ ಪ್ರವೀಣ್ ನಿರ್ಮಿಸುತ್ತಿದ್ದು ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ಜಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
Advertisement