'ಪುಷ್ಪಕ ವಿಮಾನ'ದಲ್ಲಿ ವಿಮಾನವು ಒಂದು ಪಾತ್ರ: ನಿರ್ದೇಶಕ ಎಸ್ ರವೀಂದ್ರನಾಥ್

ರಮೇಶ್ ಅರವಿಂದ್ ಅವರ ನಟನೆಯ ೧೦೦ ನೇ ಚಿತ್ರ 'ಪುಷ್ಪಕ ವಿಮಾನ' ಈ ವಾರ ಸೆನ್ಸಾರ್ ಮಂಡಳಿ ಮುಂದೆ ಬರಲಿದೆ. ಈ ಸಿನೆಮಾದ ವಿಶೇಷ ಪಾತ್ರದ ನೋಟವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಗ್ರಾಫಿಕ್ಸ್ ನಲ್ಲಿ ಸೃಷ್ಟಿಯಾದ ವಿಮಾನ
ಗ್ರಾಫಿಕ್ಸ್ ನಲ್ಲಿ ಸೃಷ್ಟಿಯಾದ ವಿಮಾನ
Updated on
ಬೆಂಗಳೂರು: ರಮೇಶ್ ಅರವಿಂದ್ ಅವರ ನಟನೆಯ ೧೦೦ ನೇ  ಚಿತ್ರ  'ಪುಷ್ಪಕ ವಿಮಾನ' ಈ ವಾರ ಸೆನ್ಸಾರ್ ಮಂಡಳಿ ಮುಂದೆ ಬರಲಿದೆ. ಈ ಸಿನೆಮಾದ ವಿಶೇಷ ಪಾತ್ರದ ನೋಟವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅದುವೇ ವಿಮಾನ. ವಿಮಾನ ಮುಖ್ಯಪಾತ್ರಗಳಷ್ಟೇ ಕಥೆಗೆ ಕೊಡುಗೆ ನೀಡಿದೆ ಎನ್ನುತ್ತಾರೆ ನಿರ್ದೇಶಕ ಎಸ್ ರವೀಂದ್ರನಾಥ್. 
ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿರುವ ಇದು ೯೦ ರ ದಶಕದ ವಿಮಾನದ ಮಾಡೆಲ್ ಎಂದು ತಿಳಿಸುವ ನಿರ್ದೇಶಕ "ರಮೇಶ್ ಅರವಿಂದ್ ಅಭಿನಯಿಸಿರುವ ತಂದೆಯ ಪಾತ್ರ ಮತ್ತು ಬಾಲನಟಿ ಯುವಿನ ಪಾರ್ಥವಿ ನಟಿಸಿರುವ ಮಗಳ ನಡುವಿನ ಭಾವನಾತ್ಮಕ ಸಂಬಂಧ ಮತ್ತು ಉತ್ಸಾಹಕ್ಕೆ ಈ ವಿಮಾನ ಕಾರಣ. ದೂರದಲ್ಲಿ ಹಾರುವ ವಿಮಾನದ ಶಬ್ದ ಮತ್ತು ನೋಟ ಅವರನ್ನು ಸಂತಸವಾಗಿಟ್ಟಿರುತ್ತದೆ, ಆದರೆ ಇದೆ ವಿಮಾನ ಅವರ ಜೀವನದಲ್ಲಿ ಹಲವು ತಿರುವುಗಳಿಗೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಈ ವಿಮಾನ ಜೋಕರ್ ಆಗಿಯೂ, ಉಡುಗೊರೆಯಾಗಿಯೂ" ಕಾಣಿಸಿಕೊಂಡಿದೆ ಎನ್ನುತ್ತಾರೆ ರವೀಂದ್ರನಾಥ್. 
ಈ ವಿಮಾನ ಮಾದರಿಯನ್ನು ಸಿನೆಮಾದ ಜೊತೆಗೆ ಸಿನಿಮಾಮಂದಿರಗಳಲ್ಲಿ ಪ್ರದರ್ಶನಕ್ಕೆ ಇಡಲಾಗುವುದಂತೆ. ಮೈಸೂರಿನಲ್ಲಿ ಈ ಮಾದರಿಗಳು ಉತ್ಪಾದನೆಯಾಗುತ್ತಿದ್ದು, ನಗರ ಸಿನಿಮಾಮಂದಿರಗಳಿಗೆ ಶೀಘ್ರದಲ್ಲೇ ಬರಲಿವೆ. 
ವಿಖ್ಯಾತ್ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಪುಷ್ಪಕ ವಿಮಾನ' ೨೦೧೭ ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ರಚಿತಾ ರಾಮ್ ಕೂಡ ನಟಿಸಿದ್ದು, ಜೂಹಿ ಚಾವ್ಲಾ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದು, ಭುವನ್ ಗೌಡ ಅವರ ಛಾಯಾಗ್ರಹಣ ಸಿನೆಮಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com