'ಬಿಗ್'ಬಾಸ್ 10': ತಾಳ್ಮೆ ಕಳೆದುಕೊಂಡು ಸ್ಪರ್ಧಿಯೊಬ್ಬರನ್ನು ಹೊರಹಾಕಿದ ಸಲ್ಲು!

ಶೋ ಉದ್ದಕ್ಕೂ ತನ್ನ ಕೆಟ್ಟ ವರ್ತನೆಯನ್ನು ತೋರುತ್ತಲೇ ಬಂದಿದ್ದ ಸ್ಪರ್ಧಿಯೊಬ್ಬರ ವಿರುದ್ಧ ನಟ ಸಲ್ಮಾನ್ ಖಾನ್ ಅವರು ತೀವ್ರವಾಗಿ ಕೆಂಡಾಮಂಡಲವಾಗಿದ್ದು, ಶೋದಿಂದಲೇ ಸ್ಪರ್ಧಿಯನ್ನು ಹೊರ ಹಾಕಿರುವ ಘಟನೆ ನಡೆದಿದೆ...
ಪ್ರಿಯಾಂಕ ಜಗ್ಗಾ ಹಾಗೂ ನಟ ಸಲ್ಮಾನ್ ಖಾನ್
ಪ್ರಿಯಾಂಕ ಜಗ್ಗಾ ಹಾಗೂ ನಟ ಸಲ್ಮಾನ್ ಖಾನ್
Updated on

ನವದೆಹಲಿ: ಶೋ ಉದ್ದಕ್ಕೂ ತನ್ನ ಕೆಟ್ಟ ವರ್ತನೆಯನ್ನು ತೋರುತ್ತಲೇ ಬಂದಿದ್ದ ಸ್ಪರ್ಧಿಯೊಬ್ಬರ ವಿರುದ್ಧ ನಟ ಸಲ್ಮಾನ್ ಖಾನ್ ಅವರು ತೀವ್ರವಾಗಿ ಕೆಂಡಾಮಂಡಲವಾಗಿದ್ದು, ಶೋದಿಂದಲೇ ಸ್ಪರ್ಧಿಯನ್ನು ಹೊರ ಹಾಕಿರುವ ಘಟನೆ ನಡೆದಿದೆ.

ಹಿಂದಿಯ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಸಾಕಷ್ಟು ವರ್ಷಗಳಿಂದಲೂ ನಟ ಸಲ್ಮಾನ್ ಖಾನ್ ಅವರು ಯಶಸ್ವಿಯಾಗಿ ನಡೆಸಿಕೊಡುತ್ತಾ ಬಂದಿದ್ದಾರೆ. ಪ್ರಸ್ತುತ ಹಿಂದಿಯಲ್ಲಿ ಬಿಗ್ ಬಾಸ್, 10ನೇ ಆವೃತ್ತಿಯಲ್ಲಿ ಈಗಾಗಲೇ ಪ್ರಸಾರ ಗೊಳ್ಳುತ್ತಿದ್ದೆ.

ಬಿಗ್ ಬಾಸ್ ಆರಂಭವಾದಾಗಿನಿಂದಲೂ ಎಲ್ಲಿಯೂ ಯಾವುದೇ ಸ್ಪರ್ಧಿಗಳ ವಿರುದ್ದ ಗರಂ ಆಗದೆ, ತಾಳ್ಮೆಯಿಂದಲೇ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದ ಸಲ್ಮಾನ್ ಅವರು, ನಿನ್ನೆ ಮಾತ್ರ ಸ್ಪರ್ಧಿಯೊಬ್ಬರ ವಿರುದ್ದ ತೀವ್ರವಾಗಿ ಕೆಂಡಾಮಂಡಲವಾಗಿದ್ದಾರೆ.

ಕಾರ್ಯಕ್ರಮ ಆರಂಭವಾಗಿ ಶೋ ಒಳಗೆ ಹೋದಾಗಿನಿಂದಲೂ ಇತರೆ ಸ್ಪರ್ಧಿಗಳೊಂದಿಗೆ ದುರ್ವತನೆ ತೋರಿಕೊಂಡು ಬರುತ್ತಿದ್ದ ಪ್ರಿಯಾಂಕಾ ಜಗ್ಗಾ ಅವರ ವಿರುದ್ದ ಸಲ್ಮಾನ್ ಅವರು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾರೆ. ಪ್ರಿಯಾಂಕಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಲ್ಮಾನ್ ಅವರು ಕೊನೆಗೆ ಪ್ರಿಯಾಂಕಾ ಅವರನ್ನು ತಾವಾಗಿಯೇ ಶೋದಿಂದಲೇ ಹೊರಹಾಕಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿಯೇ ನಿರೂಪಕರೊಬ್ಬರು ಸ್ಪರ್ಧಿಯೊಬ್ಬರನ್ನು ಹೊರಹಾಕಿರುವುದು ಇದೇ ಮೊದಲಾಗಿದೆ.

ಪ್ರಿಯಾಂಕ ಜಗ್ಗಾ ಅವರು ಶೋ ಪ್ರಾರಂಭವಾದ ಮೊದಲ ವಾರದಲ್ಲಿಯೇ ಮನೆಯಿಂದ ಎಲಿಮಿನೇಟ್ ಆಗಿದ್ದರು. ಇದಾದ ನಂತರ ಮತ್ತೊಮ್ಮೆ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟಿದ್ದರು. ಮತ್ತೊಮ್ಮೆ ಅವಕಾಶ ನೀಡಿದ್ದರೂ, ತಮ್ಮ ಉಪದ್ರವವನ್ನು ನಿಲ್ಲಿಸದ ಪ್ರಿಯಾಂಕಾ ಅವರು, ಇತರೆ ಸ್ಪರ್ಧಿಗಳೊಂದಿಗೆ ದುರ್ವರ್ತನೆಯನ್ನು ತೋರುತ್ತಿದ್ದರು.

ಸಾಕಷ್ಟು ವಾರಗಳಿಂದಲೂ ಇದನ್ನು ಸಲ್ಮಾನ್ ಖಾನ್ ಅವರು ಸಹಿಸಿಕೊಂಡೇ ಬಂದಿದ್ದರು. ಆದರೆ, ನಿನ್ನೆ ಮಾತ್ರ ತಾಳ್ಮೆ ಕಳೆದುಕೊಂಡ ಸಲ್ಲು ಏಕಾಏಕಿ ಪ್ರಿಯಾಂಕ ಅವರನ್ನು ಮನೆಯಿಂದಲೇ ಹೊರ ಹಾಕಿದ್ದಾರೆ. ಅಲ್ಲದೆ, ಒಂದು ವೇಳೆ ಪ್ರಿಯಾಂಕ ಅವರು ಮತ್ತೆ ಮನೆ ಪ್ರವೇಶ ಮಾಡಿದ್ದೇ ಆದರೆ, ಕಲರ್ಸ್ ವಾಹಿನಿಯೊಂದಿಗೆ ಕೆಲಸ ಮಾಡುವುದಿಲ್ಲ. ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com