
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, 51ರ ವಸಂತಕ್ಕೆ ಕಾಲಿಟ್ಟಿದ್ದಾರೆ.
ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಸಹೋದರಿ ಅರ್ಪಿತಾ ಮಗು ಅಹಿಲ್ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಸಲ್ಮಾನ್ ಖಾನ್ ಅವರು, ಈ ಕುರಿತ ಫೋಟೋವೊಂದನ್ನು ಇಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಸಲ್ಮಾನ್ ಶೇರ್ ಮಾಡಿರುವ ಫೋಟೋದಲ್ಲಿ ಸಲ್ಮಾನ್ ಅವರು ಕೇಕ್ ಕಟ್ ಮಾಡುತ್ತಿದ್ದು, ಈ ವೇಳೆ ಪುಟ್ಟ ಅಳಿಯ ಅಹಿಲ್ ಹಾಗೂ ಆಯುಷ್ ಶರ್ಮಾ ಇನ್ನಿತರೆ ನಟ, ನಟಿಯರು ಇರುವುದು ಕಂಡು ಬಂದಿದೆ.
Advertisement