ಪ್ರಿಯಾಂಕ ಛೋಪ್ರಾಗೆ ಅಂತಾರಾಷ್ಟ್ರೀಯ ತಾರೆಯಾಗುವ ಸಾಮರ್ಥ್ಯವಿತ್ತು: ಶಾಹಿದ್ ಕಪೂರ್

ಹಾಲಿವುಡ್ ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಭವಿಷ್ಯ ರೂಪಿಸಿಕೊಳ್ಳುತ್ತಿರುವುದರ ಬಗ್ಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಸಂತಸಗೊಂಡಿದ್ದಾರೆ.
ಪ್ರಿಯಾಂಕ ಛೋಪ್ರಾ- ಶಾಹಿದ್ ಕಪೂರ್ (ಸಂಗ್ರಹ ಚಿತ್ರ)
ಪ್ರಿಯಾಂಕ ಛೋಪ್ರಾ- ಶಾಹಿದ್ ಕಪೂರ್ (ಸಂಗ್ರಹ ಚಿತ್ರ)

ಮುಂಬೈ: ಹಾಲಿವುಡ್ ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಭವಿಷ್ಯ ರೂಪಿಸಿಕೊಳ್ಳುತ್ತಿರುವುದರ ಬಗ್ಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಸಂತಸಗೊಂಡಿದ್ದು, ಪ್ರಿಯಾಂಕ ಛೋಪ್ರಾಗೆ ಅಂತಾರಾಷ್ಟ್ರೀಯ ತಾರೆಯಾಗುವ ಸಾಮರ್ಥ್ಯವಿತ್ತು ಎಂದು ಹೇಳಿದ್ದಾರೆ.

ಹಾಲಿವುಡ್ ನಲ್ಲಿ ನಟಿಸುವ ಮೂಲಕ ಪ್ರಿಯಾಂಕ ಛೋಪ್ರಾ ದೇಶ ಹೆಮ್ಮೆ ಪಡುವ ರೀತಿ ಮಾಡಿದ್ದಾರೆ. ನಾವೆಲ್ಲರೂ ಪ್ರಿಯಾಂಕ ಬಗ್ಗೆ ಹೆಮ್ಮೆ ಪಡುತ್ತೇವೆ. ಪ್ರಿಯಾಂಕ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಸಂತಸದ ವಿಷಯ ಎಂದು ಜೀ ಸಿನಿ ಅವಾರ್ಡ್ಸ್ 2016 ರ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಶಾಹಿದ್ ಕಪೂರ್ ಹೇಳಿದ್ದಾರೆ. ಬಾಜಿರಾವ್ ಮಸ್ತಾನಿ ಚಿತ್ರ ಬಿಡುಗಡೆಯಾದಾಲೂ ಶಾಹಿದ್ ಕಪೂರ್ ಪ್ರಿಯಾಂಕ ಛೋಪ್ರಾ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com