ಸಮಸ್ತ ಆಸ್ತಿಯನ್ನು ಉದಯೋನ್ಮುಖ ಕಲಾವಿದರಿಗೆ ನೀಡಲಿರುವ ಸಂಗೀತ ನಿರ್ದೇಶಕ ಖಯ್ಯಮ್ ಹಶ್ಮಿ

ಖ್ಯಾತ ಸಂಗೀತ ಸಂಯೋಜಕ ಮೊಹಮ್ಮದ್ ಜಹುರ್ ಖಯ್ಯಮ್ ಹಶ್ಮಿ, ತಮ್ಮ ಸಮಸ್ತ ಆಸ್ತಿಯನ್ನು ಉದಯೋನ್ಮುಖ ಕಲಾವಿದರಿಗೆ ಉಪಯೋಗವಾಗುವಂತೆ ವಿನಿಯೋಗಿಸಲು ನಿರ್ಧರಿಸಿದ್ದಾರೆ.
ಮೊಹಮ್ಮದ್ ಜಹುರ್ ಖಯ್ಯಮ್ ಹಶ್ಮಿ
ಮೊಹಮ್ಮದ್ ಜಹುರ್ ಖಯ್ಯಮ್ ಹಶ್ಮಿ

ಖ್ಯಾತ ಸಂಗೀತ ಸಂಯೋಜಕ ಮೊಹಮ್ಮದ್ ಜಹುರ್ ಖಯ್ಯಮ್ ಹಶ್ಮಿ, ತಮ್ಮ ಸಮಸ್ತ ಆಸ್ತಿಯನ್ನು ಉದಯೋನ್ಮುಖ ಕಲಾವಿದರಿಗೆ ಉಪಯೋಗವಾಗುವಂತೆ ವಿನಿಯೋಗಿಸಲು ನಿರ್ಧರಿಸಿದ್ದಾರೆ.
ಸುಮಾರು ನಾಲ್ಕು ದಶಕಗಳ ಕಾಲ ಜನಪ್ರಿಯ ಹಾಡುಗಳನ್ನು ಸಂಯೋಜಿಸಿರುವ  ಹಶ್ಮಿ, ಈ ವರೆಗೆ ಸುಮಾರು 10 ಕೋಟಿ ರೂಪಾಯಿ ಅಸ್ತಿ ಗಳಿಸಿದ್ದು ಇದನ್ನು ಖಯ್ಯಮ್ ಜಗಜೀತ್ ಕೌರ್ ಕೆಪಿಎಂಜಿ ಚಾರಿಟೇಬಲ್ ಟ್ರಸ್ಟ್ ಗೆ ನೀಡಲು ಖಯ್ಯಮ್ ಹಶ್ಮಿ ನಿರ್ಧರಿಸಿದ್ದಾರೆ.
ಕೆಪಿಎಂಜಿ ಟ್ರಸ್ಟ್ ಗೆ ತಮ್ಮ ಗಳಿಕೆಯ ಆಸ್ತಿಯನ್ನು ನೀಡುವ ಮೂಲಕ ಉದಯೋನ್ಮುಖ ಕಲಾವಿದರು, ಸಿನಿಮಾ ತಂತ್ರಜ್ಞರಿಗೆ ನೆರವಾಗುತ್ತಿದ್ದಾರೆ. ಸಂಗೀತ ನಿರ್ದೇಶನದ ಪ್ರಾರಂಭದ ದಿನಗಳಲ್ಲಿ ತಾವು ಎದುರಿಸಿದ ಕಷ್ಟಗಳನ್ನು ನೆನಪಿಸಿಕೊಳ್ಳುವ ಖಯ್ಯಮ್ ಹಶ್ಮಿ ಉದಯೋನ್ಮುಖ ಕಲಾವಿದರು ಸಮಸ್ಯೆ ಎದುರಿಸದಂತೆ ಸಹಾಯ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com