ವರನಟ ರಾಜಕುಮಾರ್ ಅವರ ತಮ್ಮ ದಿವಂಗತ ಎಸ್ ಪಿ ವರದರಾಜ್
ವರನಟ ರಾಜಕುಮಾರ್ ಅವರ ತಮ್ಮ ದಿವಂಗತ ಎಸ್ ಪಿ ವರದರಾಜ್

ವರದರಾಜು ಜೀವನ ಶೀಘ್ರದಲ್ಲೇ ಸಿನೆಮಾ ಆಗಲಿದೆ: ಶಿವರಾಜ್ ಕುಮಾರ್

ರಂಗಭೂಮಿ ಕಲಾವಿದರಾದ ಡಿಂಗ್ರಿ ನಾಗರಾಜು ಮತ್ತು ಕೊಟ್ಟೂರು ಕೋಮಲಮ್ಮ ಈ ವರ್ಷದ 'ಎಸ್ ಪಿ ವರದರಾಜು ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ.
Published on

ಬೆಂಗಳೂರು: ರಂಗಭೂಮಿ ಕಲಾವಿದರಾದ ಡಿಂಗ್ರಿ ನಾಗರಾಜು ಮತ್ತು ಕೊಟ್ಟೂರು ಕೋಮಲಮ್ಮ ಈ ವರ್ಷದ 'ಎಸ್ ಪಿ ವರದರಾಜು ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ಭಾನುವಾರ ಈ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜಕುಮಾರ್, ತಮ್ಮ ಚಿಕ್ಕಪ್ಪ ಎಸ್ ಪಿ ವರದರಾಜ್ ಅವರ ಜೀವನಾಧಾರಿತ ಸಿನೆಮಾವನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದಿದ್ದಾರೆ.

ಈ ಸಿನೆಮಾದ ಹೆಸರು 'ಅಪ್ಪಣ್ಣ' ಇರಬಹುದು ಎಂಬ ಸುಳಿವು ಕೂಡ ನೀಡಿದ್ದಾರೆ. ವರನಟ ರಾಜಕುಮಾರ್ ಅವರ ತಮ್ಮ ವರದರಾಜ್ ಅವರನ್ನು ಪ್ರೀತಿಯಿಂದ ಅಪ್ಪಣ್ಣ ಎಂದೆ ಕರೆಯಲಾಗುತ್ತಿತ್ತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ರಾಜಕುಮಾರ್ ಅವರ ಜೀವನ ರೂಪಿಸುವುದಕ್ಕೆ ಕಾರಣರಾದ ವರದರಾಜ್ ಅವರ ಕಾಣಿಕೆಗಳನ್ನು ನೆನಪಿಸಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com